ಪಬ್ ಜಿ ಸೇರಿ 118 ಆ್ಯಪ್ ಗಳ ಬ್ಯಾನ್

ನವದೆಹಲಿ: ಜಗತ್ತಿನ ಜನಪ್ರಿಯ ಆನ್ ಲೈನ್ ಗೇಮ್ ಪಬ್ ಜಿ ಸೇರಿದಂತೆ 118 ಚೀನೀ ಮೊಬೈಲ್ ಆ್ಯಪ್ ಗಳನ್ನು ಕೇಂದ್ರ ಸರ್ಕಾರ ಬುಧವಾರ ನಿಷೇಧಿಸಿದೆ.
ಭಾರತದ ಗೌಪ್ಯತೆಗೆ ಹಾನಿ ಮಾಡುವ ಅಪ್ಲಿಕೇಶನ್‍ಗಳ ವಿರುದ್ಧ ಕ್ರಮ ಕೈಗೊಳ್ಳುವ ನಿಟ್ಟಿನಲ್ಲಿ 118 ಆ್ಯಪ್‍ಗಳ ಮೇಲೆ ನಿರ್ಬಂಧ ವಿಧಿಸಲಾಗಿದೆ ಎಂದು ಕೇಂದ್ರ ಸರ್ಕಾರ ತಿಳಿಸಿದೆ.
ಆಂಡ್ರಾಯ್ಡ್ ಮತ್ತು ಐಒಎಸ್ ಪ್ಲಾಟ್‍ಫಾರ್ಮ್‍ಗಳಲ್ಲಿ ಕೆಲವು ಮೊಬೈಲ್ ಅಪ್ಲಿಕೇಶನ್‍ಗಳನ್ನು ದುರುಪಯೋಗಪಡಿಸಿಕೊಂಡಿರುವ ಬಗ್ಗೆ ವರದಿಯಾಗಿತ್ತು.
ಭಾರತದ ರಾಷ್ಟ್ರೀಯ ಭದ್ರತೆ ಮತ್ತು ರಕ್ಷಣೆಗೆ ಪ್ರತಿಕೂಲವಾದ ಅಂಶಗಳಿಂದ ಕೂಡಿರುವ ಹಲವು ಆ್ಯಪ್ ಗಳಿದ್ದವು. ಇವುಗಳು ದೇಶದ ಸಾರ್ವಭೌಮತ್ವ ಮತ್ತು ಸಮಗ್ರತೆಗೆ ಧಕ್ಕೆ ತರುತ್ತದೆ.
ಹಾಗಾಗಿ ಭಾರತೀಯ ಸೈಬರ್‍ಪೇಸ್‍ನ ಸುರಕ್ಷತೆಗಾಗಿ ಈ ಕ್ರಮ ಕೈಗೊಳ್ಳಲಾಗಿದೆ ಎಂದು ಸಚಿವಾಲಯದ ಹೇಳಿಕೆಯಲ್ಲಿ ತಿಳಿಸಿದೆ.