ಡ್ರಗ್ಸ್ ದಂಧೆ: ನಟಿ ರಾಗಿಣಿ ಮತ್ತೆ 5 ದಿನ ಸಿಸಿಬಿ ಪೊಲೀಸರ ವಶಕ್ಕೆ

ಬೆಂಗಳೂರು: ಡ್ರಗ್ಸ್ ದಂಧೆ ನಂಟು ಆರೋಪದಲ್ಲಿ ಸೆರೆಯಾಗಿರುವ ನಟಿ ರಾಗಿಣಿ ದ್ವಿವೇದಿ ಅವರನ್ನು ಮತ್ತೆ 5 ದಿನಗಳ ಕಾಲ ಸಿಸಿಬಿ ಪೊಲೀಸರ ವಶಕ್ಕೆ ನೀಡಲಾಗಿದೆ.
ರಾಗಿಣಿ ಅವರ ಪೆÇಲೀಸ್ ಕಸ್ಟಡಿ ಅವಧಿ ಸೋಮವಾರ ಅಂತ್ಯವಾಗಿದೆ.
ಹಾಗಾಗಿ ಪೆÇಲೀಸರು ರಾಗಿಣಿ ಅವರನ್ನು ವಿಡಿಯೋ ಕಾನ್ಫರೆನ್ಸ್ ಮೂಲಕ 1ನೇ ಎಸಿಎಂಎಂ ನ್ಯಾಯಾಲಯ ಎದರು ಹಾಜರುಪಡಿಸಿದ್ದರು.
ರಾಗಿಣಿ ವಿಚಾರಣೆ ವೇಳೆ ಯಾವುದೇ ಮಾಹಿತಿಯನ್ನೂ ನೀಡದ ಕಾರಣ ಇನ್ನೂ 10 ದಿನ ಅವರನ್ನು ವಿಚಾರಣೆಗಾಗಿ ತಮ್ಮ ವಶಕ್ಕೆ ಒಪ್ಪಿಸಬೇಕೆಂದು ಸಿಸಿಬಿ ಪೆÇಲೀಸರು ಮನವಿ ಮಾಡಿದ್ದರು.
ಆದರೆ ನ್ಯಾಯಾಧೀಶರಾದ ಜಗದೀಶ್ ಅವರು 5 ದಿನಗಳ ಕಾಲ ಸಿಸಿಬಿ ವಶಕ್ಕೆ ರಾಗಿಣಿಯನ್ನು ನೀಡಿ ಆದೇಶ ಹೊರಡಿಸಿದ್ದಾರೆ.