ಡಿ.ಕೆ ಶಿವಕುಮಾರ್ ರಾಜೀನಾಮೆಗೆ ಕೆ.ಎಸ್ ಈಶ್ವರಪ್ಪ ಆಗ್ರಹ

ರಾಯಚೂರು: ಡಿ.ಕೆ ಶಿವಕುಮಾರ್ ಅಕ್ರಮವಾಗಿ ದುಡ್ಡು ಮಾಡಿದ್ದಾರೆ ಹಾಗಾಗಿ ಅವರು ಉಪ ಮುಖ್ಯ ಮಂತ್ರಿ  ಸ್ಥಾನದಲ್ಲಿರಬಾರದು,ಕೂಡಲೇ ರಾಜೀನಾಮೆ ನೀಡಲಿ ಎಂದು ಮಾಜಿ ಸಚಿವ ಕೆ.ಎಸ್ ಈಶ್ವರಪ್ಪ ಆಗ್ರಹಿಸಿದರು.

ರಾಯಚೂರಿನಲ್ಲಿ ಶುಕ್ರವಾರ ಮಾಧ್ಯಮಗಳ ಜೊತೆ ಮಾತನಾಡಿದ ಅವರು, ಡಿ.ಕೆ ಶಿವಕುಮಾರ್ ಮನೆಯಲ್ಲಿ ಕಂತೆ ಕಂತೆ ಹಣ ಸಿಕ್ಕಿದೆ. ಇದಕ್ಕಿಂತ ಇನ್ಯಾವಾ ಸಾಕ್ಷಿ ಬೇಕು ಎಂದು ಪ್ರಶ್ನಿಸಿದರು.

ನೂರಕ್ಕೆ ನೂರು ಡಿಸಿಎಂ ಡಿ.ಕೆ ಶಿವಕುಮಾರ್ ತಪ್ಪಿತಸ್ಥ, ಕೂಡಲೇ ರಾಜೀನಾಮೆ ನೀಡಲಿ,  ಸಿಬಿಐ ತನಿಖೆಯಾದ ಮೇಲೆ ಮಂತ್ರಿ ಆಗಲಿ ಇಲ್ಲ ಜೈಲಿಗೆ ಹೋಗಲಿ ಎಂದು ತಿಳಿಸಿದರು.

ಲೋಕಸಭೆ ಚುನಾವಣೆ ಬಳಿಕ ಕಾಂಗ್ರೆಸ್ ಸರ್ಕಾರ ಇರುವುದಿಲ್ಲ ಎಂದು ಬಾಂಬ್ ಸಿಡಿಸಿದರು.

ದೇಶದಲ್ಲೇ ಎಲ್ಲೂ ಕಾಂಗ್ರೆಸ್  ನವರಿಗೆ ಅಧಿಕಾರ ಇರಲಿಲ್ಲ,  ರಾಜ್ಯದಲ್ಲಿ ಈಗ ಗ್ಯಾರಂಟಿ ಅದು, ಇದು ಹೇಳಿ ಅಧಿಕಾರಕ್ಕೆ ಬಂದಿದ್ದಾರೆ.

ಈಗ ಡಿ.ಕೆ.ಶಿವಕುಮಾರ್ ಕೇಸ್ ಬಂದಿದೆ. ಸತೀಶ್ ಜಾರಕಿಹೋಳಿ ಎಷ್ಟು ಜನರನ್ನ ಕರೆದುಕೊಂಡು ಹೋಗುತ್ತಾರೋ ಗೊತ್ತಿಲ್ಲ. ಸರ್ಕಾರ ಬಿದ್ದು ಹೋಗುವುದರಲ್ಲಿ  ಅನುಮಾನವೇ ಇಲ್ಲ ಎಂದು ಈಶ್ವರಪ್ಪ ಹೇಳಿದರು.