ಚಾಮರಾಜನಗರ: ವಿದ್ಯುತ್ ಸ್ಪರ್ಶದಿಂದ ನೆಲಕ್ಕುರುಳಿದ್ದ ರಣಹದ್ದುಗಳನ್ನು ಚಾಮರಾಜನಗರ ಜಿಲ್ಲಾ ಪೆÇಲೀಸ್ ವರಿಷ್ಠಾಧಿಕಾರಿ ದಿವ್ಯಾಸಾರ ಅವರು ಆರೈಕೆ ಮಾಡಿ ಮಾನವೀಯತೆ ಮೆರೆದಿದ್ದಾರೆ.
ಮಂಗಳವಾರ ಸಂಜೆ ವಿದ್ಯುತ್ ತಂತಿಯ ಸ್ಪರ್ಶದಿಂದ ಎರಡು ರಣಹದ್ದುಗಳು ನಿತ್ರಾಣಗೊಂಡು ಚಾಮರಾಜನಗರ ಎಸ್.ಪಿ ದಿವ್ಯಾ ಸಾರಾ ಥಾಮಸ್ ಅವರ ನಿವಾಸದ ಹಾದಿಯಲ್ಲೇ ನೆಲಕ್ಕೆ ಬಿದ್ದು ಒದ್ದಾಡುತ್ತಿದ್ದವು.
ಎಸ್.ಪಿ ಅವರು ಇದನ್ನು ಕಂಡು ತಕ್ಷಣ ತಮ್ಮ ವಾಹನದಲ್ಲಿದ್ದ ಗನ್ ಮ್ಯಾನ್ ಸಹಾಯದೊಂದಿಗೆ ಸಮೀಪದಲ್ಲಿದ್ದ ಪಶು ವೈದ್ಯ ಡಾ. ಮನೋಹರ್ ಅವರ ಕ್ಲಿನಿಕ್ ನಲ್ಲಿ ರಣಹದ್ದುಗಳಿಗೆ ಚಿಕಿತ್ಸೆ ಕೊಡಿಸಿದ್ದಾರೆ.
ಚಿಕಿತ್ಸೆಯ ಬಳಿಕ ರಣಹದ್ದುಗಳು ಚೇತರಿಸಿಕೊಂಡಿವೆ.
ಎರಡು ರಣಹದ್ದುಗಳ ಜೀವ ಉಳಿಸಿ ಮಹಿಳಾ ಅಧಿಕಾರಿ ದಿವ್ಯಾ ಸಾರಾ ಥಾಮಸ್ ಎಲ್ಲರ ಮೆಚ್ಚುಗೆಗೆ ಪಾತ್ರರಾಗಿದ್ದಾರೆ.