-ಜಿ.ಆರ್.ಸತ್ಯಲಿಂಗರಾಜು
ಕರುಣಾರಸ: ಇದನ್ನ ಕಣ್ಣೀರು ತುಂಬಿಸಿ, ರೆಪ್ಪೆ ಬಡಿಯುತ್ತಾ, ಮೂಗಿನ ತುದಿ ನೋಡಿ ಅಭಿನಯಿಸುವಂಥದ್ದು.
ಇತರರೂ ಕೂಡ ನನ್ನಂತೆ ಎಂಬ ಉದ್ದೇಶ ಇದರದ್ದು. ಬೇರೆಯವರ ಬಗ್ಗೆ ಮರುಗುವುದು, ದುಃಖ-ಯಾತನೆ ಅನುಭಿಸುವುದು, ದಯಾಗುಣ, ತ್ಯಾಗ, ಕರುಣೆ, ಆರ್ಧತೆ, ದೀನತೆ, ಅನುಕಂಪ ತೋರಿಸುವುದು ಕರುಣಾರಸದ ಭಾವಗಳು.
ಭಯ, ದೈನ್ಯ, ಶೋಕ, ಮರಣ, ಅಳು, ಬೇಡಿಕೊಳ್ಳುವುದು ಇವೆಲ್ಲ ಕರುಣಾರಸಗಳು.
ರೌದ್ರ ರಸ: ಹುಬ್ಬುಗಂಟಿಕ್ಕಿ, ಕಣ್ಣು ಕೆಂಪಾಗಿಸಿಕೊಂಡು, ರೆಪ್ಪೆ ಬಡಿಯದೇ ನೆಟ್ಟ ದೃಷ್ಟಿಯಿಂದ ಆತುರದಿಂದ ನೋಡುವುದರ ಮೂಲಕ ರೌದ್ರರಸ ಅಭಿವ್ಯಕ್ತಿಸಲಾಗುತ್ತೆ.
ಸಹಿಸಲಾಗದ ಸಿಟ್ಟು, ಅವಮಾನ, ಸೋಲಿನಿಂದ ಹುಟ್ಟುವ ಕಿಚ್ಚಿನ ದಳ್ಳುರಿಯ ಪ್ರತೀಕ ಇದು.
ಹಿಂಸೆ ಇತ್ಯಾದಿ ಕೋಪೆÇೀದ್ರಿಕ್ತ ಸಂಗತಿಗಳನ್ನ ಕೆಂಗಣ್ಣಿನಿಂದ ನೋಡುವುದು, ಹಲ್ಲುಕಡಿಯುವುದು, ಅಂಗೈಗಳನ್ನ ತಿಕ್ಕುವುದೂ ಕೂಡ ರೌದ್ರ ರಸದ ಅಭಿವ್ಯಕ್ತಿ ಆಗುತ್ತೆ.
ವೀರರಸ: ಇದಕ್ಕೆ ಸ್ಥೈರ್ಯ ಮುಖ್ಯ. ಪ್ರಜ್ವಲಿಸುವ ಕಣ್ಣುಗಳನ್ನ ಸಮಾರ್ಧ ದೃಷ್ಟಿಯಿಂದ ಗಾಂಭೀರ್ಯವಾಗಿ ನೋಡಲಾಗುತ್ತೆ. ಇದರ ಮುಂದೆ ಇನ್ನೇನು ಇಲ್ಲ ಎಂಬುದನ್ನ ಇದು ವ್ಯಕ್ತಪಡಿಸುತ್ತೆ.
ಉತ್ಸಾಹ, ಪರಾಕ್ರಮ, ಪ್ರಭಾವ, ಧೈರ್ಯ, ಗರ್ವ, ಎದೆಗಾರಿಕೆ, ಛಲ, ಎದೆ ಎತ್ತಿ ನಡೆಯುವುದು, ಆತ್ಮಸ್ಥೈರ್ಯದ ಮಾತುಗಳಿಂದ ವೀರರಸ ವ್ಯಕ್ತಪಡಿಸಬಹುದು.
ಶಾಂತರಸ: ಇದಕ್ಕೆ ಪ್ರಶಾಂತತೆ ಪ್ರಮುಖ. ಅಪೇಕ್ಷೆ ಇಲ್ಲದಿರುವುದು, ವೈರಾಗ್ಯ ಭಾವನೆ, ನಿರಪರಾಧ ಭಾವನೆಯನ್ನ ಒಳಗೊಂಡಿದೆ. ಸಹನೆ, ಸೇವೆ, ಸಾತ್ವಿಕತೆ, ಸಂಯಮ ಪ್ರವೃತ್ತಿ ಇಲ್ಲಿರುತ್ತೆ.
ಏನೂ ಆಗಿಲ್ಲದ ರೀತಿ ತಟಸ್ಥ ಧೋರಣೆ, ಮೌನ ತಾಳುವುದು, ಯಾವುದಕ್ಕೂ ಮನ ಕೊಡದಿರುವುದು, ದೈವೇಚ್ಛೆ ಎನ್ನುವುದು ಇವೆಲ್ಲ ಶಾಂತ ರಸದಿಂದ ಪ್ರಕಟಿಸಬಹುದು.