ಸಚಿವ ಸಂಪುಟ ವಿಸ್ತರಣೆ ಎಂಬ ಸಂಕಟ

-ಡಾ. ಗುರುಪ್ರಸಾದ ರಾವ್ ಹವಲ್ದಾರ್

ಆಡಳಿತ ನಡೆಸುವ ಪ್ರತಿ ಸರ್ಕಾರಕ್ಕೆ  ಆಡಳಿತ ಸುಸೂತ್ರವಾಗಿ ನಡೆದುಕೊಂಡು ಹೋಗಬೇಕೆನ್ನುವುದು ಅಭಿಲಾಷೆ ಅದರೆ ಸಂಪುಟ ವಿಸ್ತಾರಣೆ ಅಥವಾ ಪುನರ್ ರಚನೆ ಮಾಡಬೇಕು ಎಂದಾಗ  ಸಂಕಟ ಸಂಕಷ್ಟ ಅಷ್ಟಿಷ್ಟಲ್ಲ

ಈಗ ಇದೇ ಸಂದ್ಗಿತೆಯಲ್ಲಿ ರಾಜ್ಯ ಸರ್ಕಾರವಿದೆ.

ಮುಖ್ಯಮಂತ್ರಿ ಬೊಮ್ಮಾಯಿ ಯವರು ಹಲವು ತಿಂಗಳಿಂದ ಸಚಿವ ಸಂಪುಟ ವಿಸ್ತರಣೆಗೆ ಪ್ರಯತ್ನಿಸುತ್ತಲೇ ಇದ್ದಾರೆ ಅದರೆ ಕೇಂದ್ರದ ವರಿಷ್ಠರು ಇನ್ನೂ ಒಪ್ಪುತ್ತಿಲ್ಲ.

 ಚುನಾವಣೆ ಒಂದು ವರ್ಷವಿರುವಾಗ ಹೆಚ್ಚಿನ ಸಚಿವರನ್ನ ಕೈಬಿಟ್ಟರೆ ಮಂತ್ರಿಸ್ಥಾನ ಕಳೆದುಕೊಂಡವರ ಅಸಮಾಧಾನ ಮತ್ತು ಬಂಡಾಯ ಚಟುವಟಿಕೆಗಳ ಭೀತಿ ಹೈಕಮಾಂಡ್ ಅನ್ನು ಕಾಡುತ್ತಿದೆ.

ಬಿಜೆಪಿ ಸರ್ಕಾರದ ಎರಡು ಅವಧಿ ಮತ್ತು ಹಿಂದಿನ ಜೆಡಿಎಸ್ – ಬಿಜೆಪಿ ಸಮ್ಮಿಶ್ರ ಸರ್ಕಾರದಲ್ಲಿ ಮಂತ್ರಿಯಾದವರನ್ನು ಸಚಿವ ಸ್ಥಾನದಿಂದ ಕೈಬಿಟ್ಟು ಅವರನ್ನು ಪಕ್ಷ ಸಂಘಟನೆಗೆ ಬಳಸಿಕೊಳ್ಳುವ ಸಾಧ್ಯತೆಗಳ ಬಗ್ಗೆಯೂ ಹೈಕಮಾಂಡ್ ಪರಿಶೀಲನೆ ನಡೆಸುತ್ತಿದೆ. ಪುನರ್ ರಚನೆ ಮಾಡಿದರೆ ಹದಿನೈದಕ್ಕೂ ಹೆಚ್ಚು ಸಚಿವಾಕಾಂಕ್ಷಿಗಳಿಗೆ ಅಧಿಕಾರ ನೀಡುವ ಅವಕಾಶವಿದೆ. ಜಾತಿವಾರು, ಪ್ರಾದೇಶಿಕವಾರು ಹಾಗೂ ಹೊಸ ಮುಖಗಳಿಗೆ ಮಂತ್ರಿ ಸ್ಥಾನ ನೀಡಬಹುದಾಗಿದೆ.

ಈ ಮೂಲಕ ಕ್ಯಾಬಿನೆಟ್​​ ನಲ್ಲಿನ ಅಸಮಾತೋಲನ ಸರಿದೂಗಿಸುವ ಬಗ್ಗೆಯೂ ಹೈಕಮಾಂಡ್ ಮಟ್ಟದಲ್ಲಿ ಚರ್ಚೆ ನಡೆಯತೊಡಗಿದೆ. ಸಂಪುಟ ಪುನರ್ ರಚನೆಯಿಂದ ಉಂಟಾಗುವ ಅಸಮಾಧಾನವನ್ನು ಹೊಸ ಮುಖಗಳಿಗೆ ಅವಕಾಶ ನೀಡುವ ಸರಿದೂಗಿಸಲು ಪ್ರಯತ್ನ ನೆಡೆಸುವ ಬಗ್ಗೆ ಯೋಚಿಸುತ್ತಿದೆ .ಸಚಿವ ಸಂಪುಟ ವಿಸ್ತರಣೆ ಮತ್ತು ಪುನರ್ ರಚನೆ ಪ್ರಕ್ರಿಯೆಗಳ ಬಗ್ಗೆ ಹೈಕಮಾಂಡ್ ನಿಗೂಢ ನಡೆ ಅನುಸರಿಸುತ್ತಿದೆ. ಸ್ವತಃ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯುಗೂ ಸಹ ಯಾವುದೇ ಸಂಗತಿ ತಿಳಿಸದೇ ತನ್ನದೇ ಆದ ಲೆಕ್ಕಾಚಾರದಲ್ಲಿ ಪ್ರಧಾನಿ ಮೋದಿ ಮತ್ತು ಅಮಿತ್ ಶಾ ಜೋಡಿ ತೊಡಗಿದೆ.

ಗುಜರಾತ್ ಮಾದರಿಯಲ್ಲಿ ಸಚಿವ ಸಂಪುಟಕ್ಕೆ ಸರ್ಜರಿ ಮಾಡಿ ಆಡಳಿತಕ್ಕೆ ವೇಗ ನೀಡಲು ಕೇಂದ್ರ ವರಿಷ್ಠರು ತೀರ್ಮಾನಿಸಿದ್ದಾರೆ. ವಿವಿಧ ಇಲಾಖೆಗಳಲ್ಲಿ ಕೇಳಿಬರುತ್ತಿರುವ ಕಮೀಷನ್ ದಂಧೆ ಆರೋಪ ಬಿಜೆಪಿಯನ್ನು ಮುಜುಗರಕ್ಕೀಡು ಮಾಡಿದೆ. ಇದರ ಜತೆಗೆ ಪಕ್ಷಕ್ಕಾಗಿ ಶ್ರಮಿಸಿದ ಪಕ್ಷದ ಯುವ ನಾಯಕರಿಗೆ ಅವಕಾಶ ಕಲ್ಪಿಸಿ ಎಲ್ಲರಿಗೂ ಅವಕಾಶ ಕೊಡುವ ವಿಚಾರ ಮುಂದಿಟ್ಟುಕೊಂಡು ಜಾತಿವಾರು ಹಾಗೂ ಸಮುದಾಯವಾರು ಹೊಸ ಸಚಿವರ ಪಟ್ಟಿಯನ್ನು ವರಿಷ್ಠರು ಸಿದ್ದಪಡಿಸುತ್ತಿದ್ದಾರೆ.

ಸಚಿವ ಸಂಪುಟ ಲಾಬಿ ಶುರುವಾದರೆ ಪರಿಸ್ಥಿತಿ ನಿಭಾಯಿಸುವುದು ಸಮಸ್ಯೆಯಾಗುತ್ತದೆ. ಹೀಗಾಗಿ ಸೀಕ್ರೇಟ್ ಆಗಿ ಕೇಂದ್ರ ವರಿಷ್ಠರಿಂದ ಸಚಿವರಾಗಿ ಅಯ್ಕೆಯಾಗಿರುವರಿಗೆ ಸಂದೇಶ ಬರಲಿದೆ. ಹಿರಿಯ ನಾಯಕರಿಗೆ ಮುಂದಿನ ಚುನಾವಣೆಗೆ ಪಕ್ಷವನ್ನು ಸಂಘಟಿಸುವ ಜವಾಬ್ದಾರಿ ವಹಿಸಿ ಹೊಸಬರಿಗೆ ಸಚಿವ ಸ್ಥಾನ ನೀಡಲಾಗುತ್ತದೆ. ಈ ಮೂಲಕ ಪಕ್ಷದಲ್ಲಿ ಸಚಿವ ಸ್ಥಾನ ಸಿಗಲಿಲ್ಲ ಎಂಬ ಭಿನ್ನಮತ ಸ್ಫೋಟಿಸದಂತೆ ಚಾಣಾಕ್ಷ ನಿರ್ಧಾರವನ್ನು ಬಿಜೆಪಿ ವರಿಷ್ಠರು ಕೈಗೊಳ್ಳುವ ನಿರ್ಧಾರ ಅವರದು.

ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಮಂತ್ರಿಮಂಡಲದಲ್ಲಿ ಸಣ್ಣ ಪುಟ್ಟ ಬದಲಾವಣೆಗಳೊಂದಿಗೆ ಕ್ಯಾಬಿನೆಟ್ ವಿಸ್ತರಣೆಗೆ ಹೈಕಮಾಂಡ್ ಬಳಿ ಒಲವು ವ್ಯಕ್ತಪಡಿಸಿದ್ದಾರೆಂದು ಹೇಳಲಾಗಿದೆ.

ಆದರೆ, ಅಕಾಂಕ್ಷಿಗಳ ಪಟ್ಟಿ ದೊಡ್ಡದು ಇದೆ, ಜಾತಿವಾರು ಸಮುದಾಯವಾರು ಶಾಸಕರನ್ನು ಅರಿಸುವುದು, ಅಸಮರ್ಪಕ ವಾಗಿ ಖಾತೆ ನಿರ್ವಹಿಸುತ್ತಿರುವರನ್ನು ಕೈಬಿಡುವುದು ಮುಂದೆ ಬರುವ ಚುನಾವಣೆ ದೃಷ್ಟಿ ಇಟ್ಟು ಕೊಂಡು ಸಚಿವ ಸಂಪುಟದ ವಿಸ್ತಾರಣೆಯೋ ,ಪುನರ್ ರಚನೆ ಎಂಬ ಯಾವುದೇ ಸಕಾರಾತ್ಮಕ ಪ್ರತಿಕ್ರಿಯೆ ನೀಡದೆ ಹೈಕಮಾಂಡ್ ತನ್ನ ನಿಲುವನ್ನು ಗೌಪ್ಯವಾಗಿಟ್ಟುಕೊಂಡಿದೆ.

ಕಳೆದ ಎರೆಡು ದಿನದ ಹಿಂದೆ ಬಿಜೆಪಿ ರಾಷ್ಟ್ರೀಯ ಸಂಘಟನಾ ಪ್ರಧಾನ ಕಾರ್ಯದರ್ಶಿ ಬಿ.ಎಲ್ ಸಂತೋಷ್‌ ನೀಡಿರುವ ನಾಯಕತ್ವ ಬದಲಾವಣೆಯ ಹೇಳಿಕೆ ಸಂಚಲನವನ್ನು ಹುಟ್ಟು ಹಾಕಿದೆ.

ಈ ನಡುವೆ ಕೇಂದ್ರ ಗೃಹ ಸಚಿವ ಅಮಿತ್ ಶಾ ರಾಜ್ಯ ಪ್ರವಾಸ ಮಹತ್ವ ಪಡೆದುಕೊಂಡಿದೆ.