ಶ್ರೀರಂಗಪಟ್ಟಣ: ನಾಲ್ಕನೇ ಆಷಾಢ ಶುಕ್ರವಾರದ ಅಂಗವಾಗಿ ಶ್ರೀರಂಗಪಟ್ಟಣದ ಶ್ರೀ ಸಂತಾನ ಮಹಾಲಕ್ಷ್ಮಿ ಅಮ್ಮನವರ ದೇವಸ್ಥಾನಕ್ಕೆ ಜನಸಾಗರವೇ ಹರಿದು ಬಂದಿತ್ತು.
ಈ ದೇವಾಲಯಕ್ಕೆ ವಿಶೇಷ ಇತಿಹಾಸವಿದೆ.
ಏನೆಂದರೆ ಇಲ್ಲಿ ಸಂತಾನ ಭಾಗ್ಯಕ್ಕಾಗಿ ಬಂದು ಮೊರೆ ಇಡುತ್ತಾರೆ. ಕೋರಿಕೆ ಈಡೇರಿದ ನಂತರ ದೇವಿಗೆ ಅಂದುಕೊಂಡಿದ್ದ ಕಾಣಿಕೆಯನ್ನು ತಲುಪಿಸಿ ತಾಯಿಯ ಕೃಪೆಗೆ ಪಾತ್ರರಾಗುತ್ತಾರೆ.
ಆಷಾಢ ಮಾಸದ ಅಂಗವಾಗಿ ಶ್ರೀರಂಗಪಟ್ಟಣ ತಾಲೂಕಿನ ಕುಂಬಾರಗೇರಿ ಬೀದಿಯಲ್ಲಿರುವ ಶ್ರೀ ಸಂತಾನ ಮಹಾಲಕ್ಷ್ಮಿ ಅಮ್ಮನವರಿಗೆ ಹೂವಿನ ಅಲಂಕಾರವನ್ನು ಏರ್ಪಡಿಸಲಾಗಿತ್ತು.
ಶ್ರೀರಂಗಪಟ್ಟಣದ ಭಕ್ತ ವೃಂದ ಬಂದು ದೇವಿ ಕೃಪೆಗೆ ಪಾತ್ರರಾದರು.
ಕರ್ನಾಟಕದಲ್ಲಿ ಅದರಲ್ಲೂ ಮಂಡ್ಯ ಜಿಲ್ಲೆಯ ಶ್ರೀರಂಗಪಟ್ಟಣದಲ್ಲಿ ತಾಯಿ ನೆಲೆಸಿದ್ದಾಳೆ.
ಮೈಸೂರು, ಬೆಂಗಳೂರು ಜಿಲ್ಲೆಗಳಿಂದಲೂ ಭಕ್ತರು ಬಂದು ದೇವಿಯಲ್ಲಿ ಪ್ರಾರ್ಥನೆ ಮಾಡಿಕೊಂಡು ಹೋಗುತ್ತಾರೆ.
ಶುಕ್ರವಾರ ರಾತ್ರಿತನಕ ಭಕ್ತರು ಆಗಮಿಸಿ ತಾಯಿಯ ದರ್ಶನ ಪಡೆದರು.