ಬೆಂಗಳೂರು: ಕ್ರೇಜಿಸ್ಟಾರ್ ರವಿಚಂದ್ರನ್ ಮನೆಯಲ್ಲಿ ಮದುವೆಯ ಸಂಭ್ರಮ ಮನೆ ಮಾಡಿದೆ.
ಅವರ ಹಿರಿಯ ಪುತ್ರ ಮನೋರಂಜನ್ ದೂರದ ಸಂಬಂಧಿ ಸಂಗೀತಾ ಅವರನ್ನು ಕೈ ಹಿಡಿದಿದ್ದಾರೆ.
ಶನಿವಾರ ಸಂಜೆ ಬೆಂಗಳೂರಿನ ಅರಮನೆ ಮೈದಾನದಲ್ಲಿ ಸುಂದರವಾಗಿ ಅಲಂಕೃತಗೊಂಡಿದ್ದ ವೇದಿಕೆಯಲ್ಲಿ ಆರತಕ್ಷತೆ ಸಮಾರಂಭದಲ್ಲಜ ಮನೋರಂಜನ್ ಹಾಗೂ ಸಂಗೀತಾ ಕಂಗೊಳಿಸುತ್ತಿದ್ದರು.
ಶಿವರಾಜ್ ಕುಮಾರ್, ರಾಘವೇಂದ್ರ ರಾಜಕುಮಾರ್, ಹಂಸಲೇಖ, ರಾಕ್ ಲೈನ್ ವೆಂಕಟೇಶ್, ಖುಷ್ಬು, ಮಾಸ್ಟರ್ ಆನಂದ್, ಉಮಾಶ್ರೀ, ಸಿಟಿ ರವಿ ಸೇರಿದಂತೆ ಅನೇಕ ರಂಗಗಳ ಗಣ್ಯರು ನವಜೋಡಿಗೆ ಶುಭ ಕೋರಿದರು.
ಭಾನುವಾರ ಮುಂಜಾನೆ ನಡೆದ ಶುಭ ಮುಹೂರ್ತದಲ್ಲಿ ಮನೋರಂಜನ್ ಮತ್ತು ಸಂಗೀತ ದಾಂಪತ್ಯಕ್ಕೆ ಕಾಲಿಟ್ಟರು.
ರವಿಚಂದ್ರನ್ ಅವರ ಮನೆಯಲ್ಲಿ ಇದು ಎರಡನೆಯ ಸಂತಸದ ಕಾರ್ಯ.
2019ರಲ್ಲಿ ರವಿಚಂದ್ರನ್ ಪುತ್ರಿ ಗೀತಾಂಜಲಿ ಅವರ ವಿವಾಹವನ್ನು ತುಂಬಾ ಅದ್ದೂರಿಯಾಗಿ ಮಾಡಿದ್ದರು.
ಆದರೆ ಮಗನ ಮದುವೆಯನ್ನು ಸಿಂಪಲ್ಲಾಗಿ ಮಾಡಲು ನಿರ್ಧರಿಸಿ ಹೆಚ್ಚು ಆಡಂಬರವಿಲ್ಲದೆ ಮುಗಿಸಿದ್ದಾರೆ.
ತಮ್ಮ ದೂರದ ಸಂಬಂಧದಲ್ಲಿ ಹುಡುಗಿಯನ್ನು ಹುಡುಕಿ ಅರೆಂಜ್ ಮ್ಯಾರೇಜ್ ಮಾಡಿದ್ದಾರೆ ರವಿ.
ವಧು ಅನ್ವೇಷಣೆಯಲ್ಲಿ ತೊಡಗಿರಬೇಕಾದರೆ ಸಂಗೀತ ಅವರ ಮನೆಯ ಕಡೆಯಿಂದ ಪ್ರಪೋಸಲ್ ಬಂದಿತ್ತು.ನಂತರ ಎರಡೂ ಕುಟುಂಬಗಳು ಒಪ್ಪಿ ವಿವಾಹಕ್ಕೆ ಸಮ್ಮತಿ ನೀಡಿದ್ದವು.