ಮೈಸೂರು: ಲಂಚ ಸ್ವೀಕರಿಸುತ್ತಿದ್ದ ಆರ್.ಟಿ.ಓ ಅಧಿಕಾರಿವೊಬ್ಬರು ಎಸಿಬಿ ಬಲೆಗೆ ಬಿದಿದ್ದಾರೆ.
ಆರ್ ಟಿ ಓ ಪಶ್ಚಿಮ ವಿಭಾಗದ ಇನ್ಸ್ ಪೆಕ್ಟರ್ ಪ್ರಭಾಕರ್, ಆತನ ಸಹಾಯಕ ಮಹೇಶ್ ಎಸಿಬಿ ಬಲೆಗೆ ಬಿದ್ದವರು.
ಆರ್ ಟಿ ಓ ಪಶ್ಚಿಮ ವಿಭಾಗದ ಕಚೇರಿ ಮೇಲೆ ಎಸಿಬಿ ಅಧಿಕಾರಿಗಳು ದಾಳಿ ನಡೆಸಿ ದಾಗ ಇನ್ಸ್ ಪೆಕ್ಟರ್ ಪ್ರಭಾಕರ್, ಆತನ ಸಹಾಯಕ ಮಹೇಶ್ ಲಂಚ ಪಡೆಯುತ್ತಿದ್ದಾಗ ಸಿಕ್ಕಿಬಿದ್ದಿದ್ದಾರೆ.
ಡ್ರೈವಿಂಗ್ ಸ್ಕೂಲ್ ನವರಿಂದ 70 ಸಾವಿರ ರೂ. ಲಂಚ ಪಡೆಯುವಾಗ ಇವರಿಬ್ಬರು ಸಿಕ್ಕಿಬಿದ್ದಿದ್ದು, ಇಬ್ಬರನ್ನು ವಿಚಾರಣೆಗಾಗಿ ಎಸಿಬಿ ಪೊಲೀಸರು ವಶಕ್ಕೆ ಪಡೆದಿದ್ದಾರೆ.
ಎಸಿಬಿ ಡಿವೈಎಸ್ಪಿ ಪರಶುರಾಮಪ್ಪ ನೇತೃತ್ವದಲ್ಲಿ ಈ ದಾಳಿ ನಡೆದಿದೆ.