ನವದೆಹಲಿ: ಗರ್ಭಕಂಠದ ಕ್ಯಾನ್ಸರ್ ನಿಂದ ಮೃತಪಟಿದ್ದಾಗಿ ಸುದ್ದಿಯಾಗಿದ್ದ ಬಾಲಿವುಡ್ ನಟಿ ಪೂನಂ ಪಾಂಡೆ ಇಂದು ನಾನು ಬದುಕಿದ್ದೇನೆ ಎಂದು ಹೇಳುವ ಮೂಲಕ ಮತ್ತೆ ಸುದ್ದಿಯಾಗಿದ್ದಾರೆ.
ಗರ್ಭಕಂಠದ ಕ್ಯಾನ್ಸರ್ ನಿಂದಾಗಿ ಪೂನಂ ಪಾಂಡೆ ನಿಧನರಾಗಿದ್ದಾರೆ ಎಂದು ಈ ನಟಿಯ ಮ್ಯಾನೇಜರ್ ನಿನ್ನೆ ಪೂನಂ ಅವರ ಅಧಿಕೃತ ಇನ್ಸ್ಟಾ ಪೇಜ್ ನಲ್ಲಿ ಹಾಕಿದ್ದರು.
ಈ ಸುದ್ದಿ ಓದಿದ ಅನೇಕರು ಶಾಕ್ ಆಗಿದ್ದರೆ, ಸರ್ವಿಕಲ್ ಕ್ಯಾನ್ಸರ್ ನಿಂದ ಬಳಲುತ್ತಿರುವವರು ಆತಂಕಕ್ಕೀಡಾಗಿದ್ದರು.
ಜತೆಗೆ ಪೂನಂ ನಿಧನ ಇಡೀ ದೇಶವೇ ಚರ್ಚೆ ಮಾಡುವಂತೆ ಆಗಿತ್ತು,ಇಷ್ಟು ಚಿಕ್ಕ ವಯಸ್ಸಿನಲ್ಲಿ ಪೂನಮ್ ಈ ಕ್ಯಾನ್ಸರ್ ಗೆ ಬಲಿಯಾದರಲ್ಲಾ ಎಂದು ಎಲ್ಲರೂ ಮರುಗಿದ್ದರು.ಅಲ್ಲದೆ ಸರ್ವಿಕಲ್ ಕ್ಯಾನ್ಸರ್ ಬಗ್ಗೆ ಚರ್ಚೆಗಳೂ ನಡೆದವು.
ಆದರೆ ಪೂನಂ ಸತ್ತಿರುವ ಸಮಾಚಾರದ ಹೊರತಾಗಿ ಬೇರೆ ಯಾವ ಫೋಟೋಗಳು ಹೊರಗೆ ಬರಲೇ ಇಲ್ಲ,ಬಾಲಿವುಡ್ ಮಂದಿಯ ಕಂಡೊಲೆನ್ಸ್ ಕೂಡಾ ಬರಲಿಲ್ಲಾ,ಹಾಗಾಗಿ ಆಕೆಯ ಸಾವಿನ ಬಗ್ಗೆ ಅನುಮಾನ ಮೂಡಿತ್ತು.
ಇಂದು ತಾನು ಬದುಕಿರುವ ಸುದ್ದಿಯನ್ನು ಸ್ವತಃ ಪೂನಂ ನೀಡಿದ್ದಾರೆ,ನಾನು ಬದುಕಿದ್ದೇನೆ,ಹಾಗೆ ಮೆಸೇಜ್ ಮಾಡಲು ಕಾರಣವಿದೆ, ಗರ್ಭಕೋಶ ಕಂಠ ಕ್ಯಾನ್ಸರ್ ಕುರಿತಾದ ಜಾಗೃತಿ ಮೂಡಿಸಬೇಕಿತ್ತು ಹಾಗಾಗಿ ಈ ಪೋಸ್ಟ್ ಮಾಡಲಾಯಿತು, ದಯವಿಟ್ಟು ಈ ಕ್ಯಾನ್ಸರ್ ಕುರಿತು ಜಾಗೃತಿ ವಹಿಸಿ ಎಂದು ಪೂನಂ ವಿಡಿಯೋ ಮೂಲಕ ಹೇಳಿದ್ದಾರೆ.
ಈ ವಿಡಿಯೋ ಹೊರ ಬರುತ್ತಿದ್ದಂತೆ ದೇಶದೆಲ್ಲೆಡೆ ಆಕೆಯ ವಿರುದ್ದ ಜನ ಮನಬಂದಂತೆ ಮಾತನಾಡುತ್ತಿದ್ದಾರೆ.
ಬಾಲಿವುಡ್ ನಟಿ ಪೂನಂ ಪಾಂಡೆ ಮೊದಲಿನಿಂದಲೂ ಹುಚ್ಚಾಟ ಆಡಿಕೊಂಡೇ ಬಂದವಳು ಈಗ ಸಾವಿನ ವಿಚಾರದಲ್ಲೂ ಹಾಗೇ ಮಾಡಿದ್ದಾಳೆ, ಸಂಬಂಧಪಟ್ಟ ಪೊಲೀಸರು ಹಾಗೂ ಕೋರ್ಟ್ ಸ್ವಯಂ ಪ್ರಕರಣ ದಾಖಲಿಸಿ ಆಕೆಯ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂಬ ಆಗ್ರಹ ವ್ಯಕವಾಗಿದೆ.
ಆಕೆಯ ವಿರುದ್ಧ ದೇಶದೆಲ್ಲ ಜನಾಕ್ರೋಶ ವ್ಯಕ್ತವಾಗುತ್ತಿದೆ, ಇದು ಜಾಗೃತಿಯಲ್ಲ, ಆಕೆ ಮಾಡಿರೋ ಹುಚ್ಚಾಟ ಎಂದು ಸೋಷಿಯಲ್ ಮೀಡಿಯಾದಲ್ಲಿ ಅನೇಕರು ಪೋಸ್ಟ್ ಹಾಕುತ್ತಿದ್ದಾರೆ.