ಬೆಂಗಳೂರು: ಸೆ.11 ರಂದು ಬೆಂಗಳೂರು ಬಂದ್ಗೆ ಖಾಸಗಿ ವಾಹನ ಚಾಲಕರ ಒಕ್ಕೂಟ ಕರೆ ಕೊಟ್ಟಿದ್ದು, ಸಿದ್ದತೆ ನಡೆದಿದೆ.
ರಾಜ್ಯ ಸರ್ಕಾರದ ಶಕ್ತಿ ಯೋಜನೆಯ ಯಶಸ್ಸು ಸರ್ಕಾರಕ್ಕೆ ಅನುಕೂಲವಾದರೆ ಆಟೋ, ಓಲಾ, ಉಬರ್ ಸೇರಿದಂತೆ ಖಾಸಗಿ ಬಸ್ಗಳಿಗೆ ದೊಡ್ಡ ಪೆಟ್ಟು ಕೊಟ್ಟಿದೆ.
ಈಗ ಮಹಿಳೆಯರು ಅವುಗಳಲ್ಲಿ ಸಂಚರಿಸುವುದನ್ನೇ ಬಿಟ್ಟಿದ್ದಾರೆ. ಇದು ಖಾಸಗಿ ವಾಹನ ಚಾಲಕರ ಹಾಗೂ ಮಾಲೀಕರ ಆತಂಕಕ್ಕೆ ಕಾರಣವಾಗಿದೆ.
ತಮಗೆ ಪರಿಹಾರ ಕೊಡುವಂತೆ ಸರ್ಕಾರಕ್ಕೆ ಒತ್ತಡ ಕೂಡ ತರಲಾಗಿತ್ತು. ಆದರೆ ಬೇಡಿಕೆ ಈಡೇರದ ಹಿನ್ನೆಲೆಯಲ್ಲಿ ಬೆಂಗಳೂರು ಬಂದ್ಗೆ ಕರೆ ನೀಡಲಾಗಿದೆ.
ಭಾನುವಾರ ರಾತ್ರಿ 12 ಗಂಟೆಯಿಂದಲೇ ಖಾಸಗಿ ವಾಹನ ಸಂಚಾರ ಬಂದ್ ಆಗಲಿದ್ದು, ಸೋಮವಾರ ರಾತ್ರಿ 12 ಗಂಟೆವರೆಗೆ ಬಂದ್ ಮಾಡಲು ಒಕ್ಕೂಟ ನಿರ್ಧಾರ ಮಾಡಿದೆ.
ಬಂದ್ಗೆ ಬೆಂಬಲ ನೀಡುವಂತೆ ಬೆಂಗಳೂರಿನ ಜನರಲ್ಲಿ ಕೂಡ ಮಾಡಿದೆ.
ಬೆಂಗಳೂರು ಮಹಾನಗರ ಬಂದ್ ಆಗಿಬಿಟ್ಟರೆ ಶಾಲಾ,ಕಾಲೇಜು,ಕಚೇರಿಗಳಿಗೆ ಹೋಗುವವರಿಗೆ ತೊಂದರೆ ಆಗಲಿದೆ.
ಸರ್ಕಾರ ಏನಾದರೂ ಖಾಸಗಿವಾಹನ ಚಾಲಕರ ಒಕ್ಕೂಟದ ಜತೆ ಮಾತನಾಡಿದರೆ ಒಳಿತಾಗಬಹುದು.
ಆದರೆ ಸರ್ಕಾರ ಬಂದ್ ಮಾಡಲು ಅವಕಾಶ ನೀಡುವುದು ಡೌಟ್.ಜತೆಗೆ ಸಾರಿಗೆ ಬಸ್ ಗಳು ಸಂಚರಿಸುವುದರಿಂದ ಎಷ್ಟರಮಟ್ಟಿಗೆ ಬಂದ್ ಆದೀತು ಕಾದು ನೋಡಬೇಕಿದೆ.