ಸೇನಾ ಹುತಾತ್ಮರಿಗೆ ಗೌರವ ನಮನ

ನವದೆಹಲಿ: ಹೆಲಿಕಾಪ್ಟರ್ ಅಪಘಾತದಲ್ಲಿ ಮೃತಪಟ್ಟ ಸೇನಾ ಮುಖ್ಯಸ್ಥ ಬಿಪಿನ್ ರಾವತ್ ಸೇರಿದಂತೆ 13 ಮಂದಿಯ ಪಾರ್ಥೀವ ಶರೀರಗಳನ್ನು ಚನ್ನೈನಲ್ಲಿರುವ ಮದ್ರಾಸ್ ರೆಜಿಮೆಂಟ್ ಕೇಂದ್ರಕ್ಕೆ ತಂದು ಸಕಲ ಸರ್ಕಾರಿ ಗೌರವ ಹಾಗೂ ಸೇನಾ ಗೌರವವನ್ನು ಸಲ್ಲಿಸಲಾಯಿತು.

ಭೂ ಸೇನೆ, ವಾಯು ದಳ ಹಾಗೂ ನೌಕಾ ಪಡೆಯ ಹಿರಿಯ ಅಧಿಕಾರಿಗಳು  ಭಾಗಿಯಾಗಿ ಗೌರವ ನಮನ ಸಲ್ಲಿಸಿದರು.

ತಮಿಳುನಾಡು ಮುಖ್ಯಮಂತ್ರಿ ಸ್ಟ್ಯಾಲಿನ್ ಸೇರಿದಂತೆ ಹಲವು ರಾಜಕೀಯ ನಾಯಕರು  ಭೇಟಿ ನೀಡಿ ಅಗಲಿದ ವೀರ ಯೋಧರಿಗೆ ಅಶೃತರ್ಪಣ ಸಲ್ಲಿಸಿದರು.

ನಂತರ ವಿಶೇಷ ವಿಮಾನದಲ್ಲಿ ಹದಿಮೂರು ಮಂದಿಯ ಪಾರ್ಥೀವ ಶರೀರರಗಳನ್ನು ದೆಹಲಿಗೆ ಕೊಂಡೊಯ್ಯಲಾಯಿತು.