ಮುಂಬೈ: ಡ್ರಗ್ಸ್ ಪ್ರಕರಣ ಸಂಬಂಧ ಬಾಲಿವುಡ್ ನಟ ಶಾರೂಖ್ ಖಾನ್ ಪುತ್ರ ಆರ್ಯನ್ನನ್ನು ಎನ್ ಸಿಬಿ ಅಧಿಕಾರಿಗಳು ವಶಕ್ಕೆ ಪಡೆದಿದ್ದಾರೆ.
ಶನಿವಾರ ಮುಂಬೈ ಸಮುದ್ರದ ಮಧ್ಯದಲ್ಲಿ ಹಡಗಿನಲ್ಲಿ ಡ್ರಗ್ಸ್ ಪಾರ್ಟಿ ಮಾಡಲಾಗುತ್ತಿದೆ ಎಂಬ ಮಾಹಿತಿ ಮೇರೆಗೆ ಎನ್ ಸಿಬಿ ಅಧಿಕಾರಿಗಳು ಐಷಾರಾಮಿ ಹಡಗಿನ ಮೇಲೆ ದಾಳಿ ನಡೆಸಿದ್ದಾರೆ.
ಡ್ರಗ್ಸ್ ರೇವ್ ಪಾರ್ಟಿ ಮಾಡುತ್ತಿದ್ದ ಸ್ಟಾರ್ ನಟನ ಮಗ ಸೇರಿ ಒಟ್ಟು 10 ಮಂದಿಯನ್ನು ಎನ್ ಸಿಬಿ ಅಧಿಕಾರಿಗಳು ವಶಕ್ಕೆ ಪಡೆದಿದ್ದಾರೆ. ದಾಳಿ ವೇಳೆ ಕೊಕೇನ್, ಎನ್ ಡಿಎಂ, ಹಾಶಿಶ್ ಮಾದಕ ದ್ರವ್ಯಗಳನ್ನು ವಶಕ್ಕೆ ಪಡೆದಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ.
ನಟ ಶಾರೂಖ್ ಖಾನ್ ಪುತ್ರ ಆರ್ಯನ್ನನ್ನು ವಶಕ್ಕೆ ಪಡೆದಿರುವ ಮುಂಬೈ ಎನ್ ಸಿಬಿ ಅಧಿಕಾರಿಗಳು ಅತನ ಫೋನ್ ಅನ್ನು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ.
ಆರ್ಯನ್ ಫೋನ್ ವಶಪಡಿಸಿಕೊಂಡಿರುವ ಎನ್ ಸಿಬಿ ಅಧಿಕಾರಿಗಳು ಫೋನ್ ಚಾಟ್ ಲಿಸ್ಟ್ ಕುರಿತಂತೆ ಪರಿಶೀಲನೆ ನಡೆಸುತ್ತಿದ್ದಾರೆ.