ಶಾಪಿಂಗ್, ತರಕಾರಿ ತರಲು, ಪಿಕಪ್ ಅಂಡ್ ಡ್ರಾಪ್ ಮಾಡಲು ಬಳಕೆ ಆಗುತ್ತಿದೆ ಪೊಲೀಸ್ ವಾಹನ

ವರದಿ: ರಾಮಸಮುದ್ರ ಎಸ್. ವೀರಭದ್ರಸ್ವಾಮಿ
ಚಾಮರಾಜನಗರ: ಜಿಲ್ಲೆಯಲ್ಲಿ ಸರ್ಕಾರಿ ವಾಹನಗಳು ಖಾಸಗೀ ವಾಹನಗಳಿಗಿಂತ ಹೆಚ್ಚಾಗಿ ದುರ್ಬಳಕೆಯಾಗುತ್ತಿದೆ. ವಿಶೇಷವಾಗಿ ಪೆÇಲೀಸರ ವಾಹನಗಳು ಕೂಡ ಎಗ್ಗಿಲ್ಲದೆ ಶಾಪಿಂಗ್, ತರಕಾರಿ ಅಂಗಡಿಗಳು, ಪಿಕಪ್ ಅಂಡ್ ಡ್ರಾಪ್ ಮಾಡಲು ದುರ್ಬಳಕೆಯಾಗುತ್ತಿರುವುದು ಮಾತ್ರ ಶೋಚನೀಯ.
ಪೆÇಲೀಸ್ ಇಲಾಖೆಗೆ ಸೇರಿದ ವಾಹನಗಳು ಇಲಾಖಾ ನಿಯಮ ಉಲ್ಲಂಘಿಸಿ ಬಳಕೆ ಮಾಡುವಂತಿಲ್ಲ.
ಆದರೆ ಚಾಮರಾಜನಗರದಲ್ಲಿ ಕೆಲ ಪೆÇಲೀಸರು ಇಲಾಖಾ ವಾಹನವನ್ನು ತಮ್ಮ ತಮ್ಮ ಖಾಸಗೀ ವಾಹನಗಳ ರೀತಿ ಠಾಣಾ ಸರಹದ್ದು ಮೀರಿ ಪಿಕಪ್ ಅಂಡ್ ಡ್ರಾಪ್, ತರಕಾರಿ ತರಲು ಹಾಗೂ ಶಾಪಿಂಗ್ ಗೆ ಬಳಸಿಕೊಳ್ಳುತ್ತಿದ್ದಾರೆ.
ಚಾಮರಾಜನಗರ ಜಿಲ್ಲೆಯ ಸಂತೆಮರಳ್ಳಿ ಠಾಣೆಯ ವಾಹನ ಪ್ರತಿನಿತ್ಯ ಚಾಮರಾಜನಗರ-ಸಂತೆಮರಳ್ಳಿ ನಡುವೆ ಸಂಚರಿಸಲಿದೆ. ಠಾಣಾ ಸಮೀಪದಲ್ಲೆ ಇದ್ದರೂ ವಸತಿ ನಿಲಯ ನೀಡದೆ ಇರೋದರಿಂದ, ಜಿಲ್ಲಾ ಕೇಂದ್ರದಲ್ಲೆ ವಸತಿ ಇರೋದ್ರಿಂದ ಪ್ರತಿನಿತ್ಯ 50 ಕಿ.ಮಿ ಪ್ರಯಾಣದ ಇಂಧನ ವೆಚ್ಚ ಪೆÇಲಾಗುತ್ತಿದೆ.
ಮುಖ್ಯ ಕೇಂದ್ರಸ್ಥಾನದಲ್ಲೆ ಇನ್ಸ್ ಪೆಕ್ಟರ್ ಇರಬೇಕು ಎಂಬ ನಿಯಮ ಇದಿಯೋ ಇಲ್ಲವೊ ನಮಗಂತು ಗೊತ್ತಿಲ್ಲ. ಆದರೆ ಅವರಿಗೆ ಅವರ ಸರಹದ್ದಿನ ವಸತಿನಿಲಯದಲ್ಲಿ ವಸತಿ ಇಲ್ಲ ಎಂಬುದು ಗೊತ್ತಿದೆ.
ಮತ್ತೊಂದೆಡೆ ಈ ಇಲಾಖಾ ವಾಹನಕ್ಕೆ ಇನ್ಸ್ ಪೆಕ್ಟರ್ ಸೇರಿದಂತೆ ಮೂರ್ನಾಲ್ಕು ಜನ ಚಾಲಕರು ಇದ್ದಾರೆ ಎಂಬುದ್ದು ತಿಳಿದು ಬಂದಿದೆ.
ಕೆಲವು ಠಾಣೆಗಳಲ್ಲಿ ಕಡ್ಡಾಯ ಹುದ್ದೆಯ ಚಾಲಕ, ತುರ್ತು ಸಂದರ್ಭ ರಜೆ ಹಾಕಿದರೆ ಇಲಾಖೆಯ ಮೇಲಾಧಿಕಾರಿಗಳೆ ವಾಹನ ಓಡಿಸಿಕೊಂಡ ಪ್ರಸಂಗವೂ ಇದೆ. ವಿಪರ್ಯಾಸ ಎಂದರೆ ಪ್ರಮುಖ ಠಾಣೆಯೊಂದರ ಜೀಪ್ ಚಾಲಕನಿಗೆ ಕೊವೆಡ್ ಬಂದು ಜಿಲ್ಲಾಸ್ಪತ್ರೆಯಲ್ಲೆ ಹಾಸಿಗೆ ಹಿಡಿದು ಮಲಗಿದಾಗ ಇಲಾಖೆಯವರು ಹೊರತುಪಡಿಸಿ ವಾರಗಟ್ಟಲೆ ಖಾಸಗಿ ವ್ಯಕ್ತಿಯನ್ನು ನಿಯೋಜಿಸಿಕೊಂಡು ಕೆಲಸ ಮಾಡಿಸಿದ ಉದಾಹರಣೆಗಳು ದಾಖಲೆ ಸಮೇತ ಇದೆ.
ಹಿಂದಿನ ಎಸ್ಪಿ ಆನಂದ್ ಕುಮಾರ್ ಅವಧಿಯಿಂದಲೂ ಇಲಾಖಾ ವಾಹನಗಳು ದುರ್ಬಳಕೆಯಾಗುತ್ತಿದ್ದು ನಂತರ ಬಂದ ಎಸ್ಪಿ ದಿವ್ಯ ಸಾರಾ ಥಾಮಸ್ ಅವದಿಯಲ್ಲೂ ಯಥೇಚ್ಚವಾಗಿ ದುರ್ಬಳಕೆಯಾಗುತ್ತಿದ್ದು ನಿಯಂತ್ರಣಕ್ಕೆ ತರುತ್ತಾರೋ ಅಥವಾ ಗೊತ್ತಿದ್ದೂ ಗೊತ್ತಿಲ್ಲದ ತರಹ ಮೌನ ವಹಿಸುತ್ತಾರೋ ಕಾದು ನೋಡಬೇಕಾಗಿದೆ.
ದಕ್ಷಿಣ ವಲಯ ಪೆÇಲೀಸ್ ಮಹಾನಿರ್ದೇಶಕ ಪ್ರವಿಣ್ ಮದುಕರ್ ಪವಾರ್ ಅವರು ಕಟ್ಟುನಿಟ್ಟಿನ ಆದೇಶ ನೀಡಿ ಜಾರಿ ಮಾಡದಿದ್ದರೆ ಪೊಲೀಸ್ ಇಲಾಖೆ ವಾಹನ ದುರ್ಬಳಕೆ ತಡೆಗಟ್ಟುವುದು ಅಸಾಧ್ಯ.