ಸಿದ್ದರಾಮಯ್ಯನವರು ವೀರಾವೇಶದಲ್ಲಿ ಅಧಿವೇಶನದಲ್ಲಿ ಮಾತಾಡಲಿ -ಸಚಿವ ಎಸ್.ಟಿಎಸ್.

ಮೈಸೂರು: ಸಿದ್ದರಾಮಯ್ಯನವರು ವೀರಾವೇಶದಲ್ಲಿ ಮೈಸೂರಿನಲ್ಲಿ ಏನು ಮಾತಾಡ್ತಾರೆ. ಅದನ್ನು ಅಧಿವೇಶನದಲ್ಲಿ ಮಾತಾಡಲಿ ಎಂದು ಜಿಲ್ಲಾ ಉಸ್ತುವಾರಿ ಸಚಿವ ಎಸ್. ಟಿ. ಸೋಮಶೇಖರ್ ಹೇಳಿದರು.
ನಗರದಲ್ಲಿ ಶನಿವಾರ ಸಚಿವ ಎಸ್. ಟಿ. ಸೋಮಶೇಖರ್ ಅವರು ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದರು.
ಸರ್ಕಾರ ಸತ್ತಿದೆ. ಮಿನಿಸ್ಟರ್ ಗಳೂ ಕೆಲಸ ಮಾಡುತ್ತಿಲ್ಲ, ಇಬ್ಬಿಬ್ಬರು ಸಿಎಂ ಇದ್ದಾರೆ ಎಂದು ಸಿದ್ದರಾಮಯ್ಯನವರು ಹೇಳಿದ್ದಾರಲ್ಲ ಎಂಬ ಪ್ರಶ್ನೆಗೆ ಸೋಮಶೇಖರ್ ಅವರು ಪ್ರತಿಕ್ರಿಯಿಸಿ, ಸೆ. 21ರಿಂದ ಅಧಿವೇಶನ ನಡೆಯತ್ತೆ. ಸಿದ್ದರಾಮಯ್ಯನವರು ವೀರಾವೇಶದಲ್ಲಿ ಮೈಸೂರಿನಲ್ಲಿ ಏನು ಮಾತಾಡ್ತಾರೆ. ಅದನ್ನು ಅಧಿವೇಶನದಲ್ಲಿ ಮಾತಾಡಲಿ, ಅಷ್ಟೇ ವೀರಾವೇಶದಿಂದ ಉತ್ತರ ನೀಡುವಂತಹ ಶಕ್ತಿ ದೇವರು ನಮಗೂ ಕೂಡ ಕೊಟ್ಟಿದ್ದಾನೆ ಎಂದು ಹೇಳಿದರು.
ವಿರೋಧ ಪಕ್ಷದವರ ಕೆಲಸ ಏನಿದೆ? ವಿರೋಧ ಪಕ್ಷದವರು ವಿರೋಧ ಮಾಡುವುದಕ್ಕೋಸ್ಕರ ಸಿದ್ಧತೆ ಮಾಡಿಕೊಳ್ಳುತ್ತಾರೆ. ನಾವು ಆಡಳಿತ ಪಕ್ಷದವರು ಆಡಳಿತ ಮಾಡುವುದಕ್ಕೋಸ್ಕರ ಸಿದ್ಧತೆ ಮಾಡಿಕೊಳ್ಳುತ್ತೇವೆ ಎಂದು ಎಸ್.ಟಿ.ಎಸ್ ತಿಳಿಸಿದರು.
ಮತ್ತೊಂದು ಪ್ರಶ್ನೆಗೆ ಸಚಿವರು ಉತ್ತರಿಸಿ, ಮೈಸೂರು ಸೇರಿದಂತೆ ಕರ್ನಾಟಕದಲ್ಲಿ ಎಲ್ಲಿಯೂ ರಸಗೊಬ್ಬರ ಕೊರತೆ ಇಲ್ಲ, ಬೀಜದ ಕೊರತೆಯೂ ಇಲ್ಲ ಎಂದರು.