ಮೈಸೂರು: ಹುಣಸೂರಿನಲ್ಲಿ ಆರ್ ಟಿ ಒ ಕಚೇರಿಯ ಗೋಡೆ ಶಿಥಿಲಗೊಂಡಿದ್ದು
ಮಳೆ ಬಂದರೆ ಸೋರುತ್ತದೆ.
ಜೋರು ಮಳೆ ಬಂದರೆ ಛಾವಣಿ ಎಲ್ಲಿ ಉದುರಿ ಬೀಳುವುದೋ ಎಂಬ ಆತಂಕದಲ್ಲೇ ಸಿಬ್ಬಂದಿ ಕೆಲಸ ಮಾಡಬೇಕಿದೆ.
ಸಧ್ಯಕ್ಕೆ ಪ್ಲಾಸ್ಟಿಕ್ ಹೊದಿಕೆಯಿಂದ ತಾತ್ಕಾಲಿಕ ರಕ್ಷಣೆ ಮಾಡಲಾಗಿದೆ,ಆದರೆ ಗೋಡೆಗಳು ಬಿರುಕು ಬಿಟ್ಟಿವೆ,ಹಾಗಾಗಿ ಮಳೆ ಬಂದಾಗ ಕಡತಗಳು ನೆನೆಯುತ್ತವೆ.
ಮೈಸೂರು – ಮಡಿಕೇರಿ ಮುಖ್ಯರಸ್ತೆಯಲ್ಲಿ 2004 ರಿಂದ ಕಾರ್ಯ ನಿರ್ವಹಿಸುತ್ತಿರುವ ಪ್ರಾದೇಶಿಕ ಸಾರಿಗೆ ಕಚೇರಿಯ ಆವರಣದಲ್ಲಿ
ಹುಲ್ಲು ಬೆಳೆದು ನಿಂತಿದೆ,ಇಂತಹ ದುಃಸ್ಥಿತಿ ಇದ್ದರೂ ಯಾರೂ ಕೇಳುವವರು ಇಲ್ಲದಂತಾಗಿದೆ.
ನೀರಾವರಿ ಇಲಾಖೆಯಿಂದ ಕಟ್ಟಡ ಬಾಡಿಗೆ ಪಡೆದು ನಡೆಯುತ್ತಿರುವ ಈ ಆರ್ ಟಿ ಒ ಕಚೇರಿಗೆ ರಕ್ಷಣೆ ಮರೀಚಿಕೆಯಾಗಿದೆ.
ಮಳೆ ಬಂದಾಗ ಇಲ್ಲಿನ ಸಿಬ್ಬಂದಿಗೆ ನರಕ ಯಾತನೆ ಅನುಭವಿಸುತ್ತಾರೆ,ಸಿಬ್ಬಂದಿ ಅಧಿಕಾರಿಗಳಿಗೇ ರಕ್ಷಣೆ ಇಲ್ಲದಿರುವಾಗ ಈ ಕಚೇರಿಗೆ ಬರುವ ಸಾರ್ವಜನಿಕರ ಗತಿ ಕೇಳುವಂತೆಯೇ ಇಲ್ಲ.
ಸ್ವಂತ ಕಟ್ಟಡ ನಿರ್ಮಿಸಲು ಸ್ಥಳ ನೀಡುವಂತೆ ಈಗಾಗಲೇ ತಾಲೂಕು ಆಡಳಿತಕ್ಕೆ ಪತ್ರ ಬರೆಯಲಾಗಿದೆ,ಆದರೆ ಇದುವರೆಗೆ ಯಾವುದೇ ಸ್ಪಂದನೆ ಸಿಕ್ಕಿಲ್ಲ.
ನೀರಾವರಿ ಇಲಾಖೆಗೆ ನಿಯತ್ತಾಗಿ ಬಾಡಿಗೆ ಕಟ್ಟಲಾಗುತ್ತಿದೆ ಆದರೆ ಈ ಕಟ್ಟಡದ ನಿರ್ವಹಣೆ ಅಧಿಕಾರಿಗಳು ತಲೆ ಕೆಡಿಸಿಕೊಂಡಿಲ್ಲ.
ಯಾವುದೇ ಅನಾಹುತ ಸಂಭವಿಸುವ ಮುನ್ನ ಸಂಬಂಧ ಪಟ್ಟವರು ಎಚ್ಚೆತ್ತುಕೊಳ್ಳುವರೆ ಎಂಬುದನ್ನು ಕಾದು ನೋಡಬೇಕಿದೆ.