ವರದಿ:ರಾಮಸಮುದ್ರ ಎಸ್.ವೀರಭದ್ರಸ್ವಾಮಿ
ಚಾಮರಾಜನಗರ: 2020-21 ಅಕ್ಟೋಬರ್ ಮಾಹೆವರೆಗೆ ಜಿಲ್ಲೆಯ ವಿವಿಧ ಠಾಣೆಗಳಲ್ಲಿ ಕಳುವಾದ ಪ್ರಕರಣಗಳ ಪೈಕಿ 64 ಪ್ರಕರಣಗಳನ್ನು ಪತ್ತೆ ಹಚ್ಚಿ 1.46,63,240 ಸ್ವತ್ತಿನ ವಾಸಪಡಿಸಿಕೊಂಡು ಇಂದು 47 ಪ್ರಕರಣದಲ್ಲಿ 69,88,555 ರೂ ಮೌಲ್ಯದ ಸ್ವತ್ತು ವಾಪಸ್ ನೀಡಲಾಗುತ್ತಿದೆ ಎಂದು ಚಾಮರಾಜನಗರ ಎಸ್ಪಿ ದಿವ್ಯ ಸಾರಾ ಥಾಮಸ್ ಅವರು ಹೇಳಿದರು.
ಚಾಮರಾಜನಗರ ಪೆÇಲೀಸ್ ಕವಾಯತು ಮೈದಾನದಲ್ಲಿ ನಡೆದ ಪ್ರಾಪರ್ಟಿ ಪೆರೆಡ್ ಅಲ್ಲಿ ಕರೆಯಲಾಗಿದ್ದ ಸುದ್ದಿಗೋಷ್ಠಿಯಲ್ಲಿ ಈ ವಿಚಾರ ತಿಳಿಸಿದರು.
ಇದೂವರೆಗೆ 175 ಕಳುವು ಪ್ರಕರಣ ದಾಖಲಾಗಿದ್ದು, ಅದರ ಅಂದಾಜು ಮೌಲ್ಯ 2.10,66,561 ಆಗಿದೆ. ಅದರಲ್ಲಿ 64 ಪ್ರಕರಣಗಳು ಪತ್ತೆಯಾಗಿದ್ದು ಶೆ. 69.60ರಷ್ಟು ಸ್ವತ್ತಿನ ಮೌಲ್ಯದ್ದಾಗಿದೆ ಎಂದರು.
ಸುದ್ದಿಗೋಷ್ಠಿಯಲ್ಲಿ ಎಎಸ್ಪಿ ಸುಂದರರಾಜು, ಡಿವೈಸ್ಪಿಗಳಾದ ಪ್ರಿಯದರ್ಶಿನಿ ಸೇರಿದಂತೆ ಇತರರು ಹಾಜರಿದ್ದರು.