ಶ್ರೀರಂಗಪಟ್ಟಣದ ಪ್ರಥಮ ದರ್ಜೆ ಕಾಲೇಜಿನಲ್ಲಿ ವಿಶ್ವ ಪರಿಸರ ದಿನಾಚರಣೆ

ಶ್ರೀರಂಗಪಟ್ಟಣ: ಶ್ರೀರಂಗಪಟ್ಟಣದ ಪ್ರಥಮ ದರ್ಜೆ ಕಾಲೇಜಿನಲ್ಲಿ ವಿಶ್ವ ಪರಿಸರ ದಿನಾಚರಣೆಯನ್ನು ಆಚರಿಸಲಾಯಿತು

ಕಾಲೇಜಿನ ಪ್ರಾಂಶುಪಾಲರು ಕಾಲೇಜಿನ ಎನ್ಎಸ್ಎಸ್ ಘಟಕದ ಅಧಿಕಾರಿಗಳಾದ ಮುಸ್ತಫ ಅವರು ವಿದ್ಯಾರ್ಥಿಗಳೊಂದಿಗೆ   ಗಿಡಗಳನ್ನು ನೆಡುವ ಮೂಲಕ ವಿಶ್ವ ಪರಿಸರ ದಿನಾಚರಣೆಯನ್ನು ಆಚರಿಸಿದರು.

ನಂತರ ಕಾಲೇಜಿನ ಭೂಗೋಳಶಾಸ್ತ್ರದ ಪದ್ಯಪಕರು ಪರಿಸರದ ಬಗ್ಗೆ ಕಾಳಜಿ ವಹಿಸಬೇಕು ಎಂದು ತಿಳಿಸಿದರು.

ಅಧುನಿಕ ಪ್ರಪಂಚದಲ್ಲಿ ಪ್ಲಾಸ್ಟಿಕ್ ನಿಂದ ಪರಿಸರಕ್ಕೆ ಬಹಳ ಹಾನಿ ಉಂಟಾಗುತ್ತಿದೆ ನಾವು ಪ್ಲಾಸ್ಟಿಕ್ ಮುಕ್ತ ಮಾಡಬೇಕು ಅದಕ್ಕೆ ಮಾರ್ಗೋಪಾಯ ಏನೆಂದರೆ ಬಟ್ಟೆ ಬ್ಯಾಗು ಮತ್ತು ಪೇಪರ್ ಬ್ಯಾಗು ಹಾಗೂ ನಾರಿನಿಂದ ತಯಾರಿಸಿದ ವಸ್ತುಗಳನ್ನು ಉಪಯೋಗಿಸಬೇಕು ಎಂದು ಹೇಳಿದರು.

ಸಾಲುಮರದ ತಿಮ್ಮಕ್ಕ‌ , ಚಿಪ್ಕೊ ಚಳವಳಿಯ ನಾಯಕ ಸುಂದರ್ ಲಾಲ ಬಹುಗುಣ ಅವರಂತೆ ಮರಗಳನ್ನು ನೆಟ್ಟು ಪೋಷಿಸಬೇಕು ಎಂಬುದನ್ನು ನೋಡಿ ಕಲಿಯಬೇಕು ಎಂದು ತಿಳಿಸಿದರು.

ಇವರು ತಮ್ಮ ಜೀವನವನ್ನೇ ಪರಿಸರ ಪೋಷಣೆಗೆ ಮುಡಿಪಾಗಿಟ್ಟಿದ್ದರು.ಇಂತವರ ಆದರ್ಶವನ್ನು ಮಾಯಿಗೂಡಿಸಿಕೊಂಡು ಹೋದರೆ  ಇಡೀ ನಾಡನ್ನು ಪರಿಸರಮಯ ಮಾಡಬಹುದು ಎಂದು ಹೇಳಿದರು.