ಬೆಂಗಳೂರು: ವಿದ್ಯಾಗಮನ ಕಾರ್ಯಕ್ರಮದಿಂದಲೇ ಶಿಕ್ಷಕರಿಗೆ ಕೊರೊನಾ ಸೋಂಕು ತಗುಲಿ ಸಾವುಗಳು ಆಗಿವೆ ಎಂಬುದು ಸರಿಯಲ್ಲ ಎಂದು ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ.ಸುಧಾಕರ್ ತಿಳಿಸಿದ್ದಾರೆ.
ನಗರದಲ್ಲಿ ಸಚಿವರು ಶುಕ್ರವಾರ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದರು.
ತನಿಖೆ ನಂತರವಷ್ಟೇ ಸೂಕ್ತ ಕಾರಣ ತಿಳಿಯಲಿದೆ ಎಂದು ಡಾ. ಕೆ. ಸುಧಾಕರ್ ಹೇಳಿದ್ದಾರೆ.
ಶಿಕ್ಷಣ ಇಲಾಖೆ ಜಾರಿಗೊಳಿಸಿರುವ ಈ ಕಾರ್ಯಕ್ರಮಕ್ಕೆ ದೇಶಾದ್ಯಂತ ಮೆಚ್ಚುಗೆವ್ಯಕ್ತವಾಗಿ ಇತರೆ ರಾಜ್ಯಗಳಲ್ಲಿ ಜಾರಿಗೊಳಿಸಲು ನಮ್ಮ ಅಧಿಕಾರಿಗಳಿಂದ ಮಾಹಿತಿ ಪಡೆದಿದ್ದಾರೆಂದರು.
ಒಂದು ವೇಳೆ ಇಂಥ ಕಾರ್ಯಕ್ರಮದಲ್ಲಿ ನ್ಯೂನತೆ ಇದೆ ಎಂದಾದರೆ ಸರಿಪಡಿಸಿಕೊಳ್ಳಲು ಸರ್ಕಾರ ಮುಕ್ತ ಮನಸ್ಸು ಹೊಂದಿದೆ ಎಂದು ಮಾಧ್ಯಮ್ ಪ್ರತಿನಿಧಿಗಳ ಪ್ರಶ್ನೆಗೆ ಉತ್ತರಿಸಿದರು.
ವಿದ್ಯಾರ್ಥಿಗಳು, ಶಿಕ್ಷಕರ ರಕ್ಷಣೆ ಮುಖ್ಯ ಎಂಬ ಕಾರಣದಿಂದಲೇ ಶಾಲೆ ಕಾಲೇಜುಗಳನ್ನು ಮುಚ್ಚಿದ ಮೊದಲ ರಾಜ್ಯ ನಮ್ಮದು. ಎಂಟು ತಿಂಗಳ ಬಳಿಕ ಪೆÇೀಷಕರು ಮತ್ತು ವಿದ್ಯಾರ್ಥಿಗಳಿಂದ ಸರ್ಕಾರದ ಮೇಲೆ ಸಾಕಷ್ಟು ಒತ್ತಡ ಬಂತು ಎಂದವರು ಹೇಲಿದರು.
ಗ್ರಾಮೀಣ ಭಾಗದಲ್ಲಿ ಆನ್ ಲೈನ್ ಶಿಕ್ಷಣಕ್ಕೆ ಅವಕಾಶ ಇಲ್ಲದಿರುವುದರಿಂದ ಏನಾದರೂ ಪರಿಹಾರ ರೂಪಿಸಬೇಕು ಎಂಬ ಆಗ್ರಹ ಬಂತು. ಶಿಕ್ಷಣ ಸಚಿವರು ತಜ್ಞರ ಜತೆ ಚರ್ಚಿಸಿ ವಿದ್ಯಾಗಮನ ಕಾರ್ಯಕ್ರಮ ರೂಪಿಸಲಾಗಿದೆ. ಒಂದು ವೇಳೆ ಇದರಿಂದಲೇ ಸೋಂಕು ಹರಡಿದೆ ಎಂದು ತಜ್ಞರು ಅಭಿಪ್ರಾಯಪಟ್ಟರೆ ಕಾರ್ಯಕ್ರಮ ನಿಲ್ಲಿಸೋಣ. ನಮಗೆ ಶಿಕ್ಷಣದ ಜತೆ ಜೀವ ಕೂಡ ಮುಖ್ಯ ಎಂದರು.