ವರದಿ: ರಾಮಸಮುದ್ರ ಎಸ್.ವೀರಭದ್ರಸ್ವಾಮಿ
ಚಾಮರಾಜನಗರ: ಜೂಜಾಟ, ಜೂಜಿನ ಕೇಂದ್ರ ಮೇಲೆ ದಾಳಿ ನಡೆಸೋದು ಕ್ರಮ ಕೈಗೊಳ್ಳೋದು ಆರಕ್ಷಕ ಕೆಲಸ ಹಾಗಾಂತ ಕೆಲ ಸಿಬ್ಬಂದಿಗಳೆ ಆಟವಾಡುತ್ತಾ ಕುಳಿತಾಗ ಕ್ರಮ ಕೈಗೊಳ್ಳುವುದಾದರೂ ಯಾರ ಮೇಲೆ?
ಇಂತಹ ಪ್ರಶ್ನೆ ಎದುರಾದಾಗ ಉತ್ತರಿಸೋದು ಕಷ್ಟ ಆಗಬಹುದು.
ಚಾಮರಾಜನಗರ ಜಿಲ್ಲೆಯ ಗುಂಡ್ಲುಪೇಟೆ ತಾಲ್ಲೂಕಿನ ಪೆÇಲೀಸ್ ವಸತಿ ನಿಲಯದ ಪಕ್ಕದಲ್ಲೆ ಇರೋ ಟಿನ್ ಹೌಸ್ ಎಂಬ ವಿಶ್ರಾಂತ ಗೃಹ ಜೂಜಿನ ಕೇಂದ್ರವಾಗಿದೆ ಎಂದರೆ ತಪ್ಪಾಗಲಾರದು.
ಪೆÇಲೀಸರು ಸಮಯ ಕಳೆಯಲು ವಾಹನದಲ್ಲೆ ಬಾಜಿಯಿಲ್ಲದೆ ಕಾರ್ಡ್ ಆಡೋದು ಸಾಮಾನ್ಯ. ಆದರೆ ಅದು ತಪ್ಪು-ಒಪ್ಪು ಅಂತ ಇಲಾಖೆ ದೃಢಿಕರೀಸಬೇಕು.
ಆದರೆ ಟಿನ್ ಹೌಸ್ ವಿಶ್ರಾಂತಿ ಗೃಹದಲ್ಲಿ ದೃಢಿಕರಿಸೋ ಅಗತ್ಯವಿಲ್ಲ. ಯಾಕೆಂದ್ರೆ ಕೆಲ ಪೆÇಲೀಸರಷ್ಟೆ ಅಲ್ಲ ಇತರ ಇಲಾಖೆ ಆಡಳಿತ ವರ್ಗದ ಸಿಬ್ಬಂದಿಗಳು ಕೂತು ಹಣ ಬಾಜೀಯಿಟ್ಟು ಜೂಜಾಡೋವಾಗ ನೇರವಾಗಿ ತಪ್ಪೆ ಎಂದು ಹೇಳಬಹುದು. ಟಿನ್ ಹೌಸ್ ಅಲ್ಲಿ ಜೂಜಾಟ ಇಂದು ನಿನ್ನೆಯದಲ್ಲ.
ಎಸ್ಪಿ ಕುಲದೀಪ್ ಕುಮಾರ್ ಜೈನ್ ಅವರಿದ್ದಾಗ ಕುಡಿತದ ಅಮಲಿನಲ್ಲಿ ಜಗಳವಾಡಿದಾಗ ಕೆಲವರನ್ನ ಮುಲಾಜಿಲ್ಲದೆ ಅಮಾನತು ಮಾಡಿದ್ದರು. ನಂತರ ಯಾವೊಬ್ಬ ಅಧಿಕಾರಿಗಳು ತಲೆ ಕೆಡಿಸಿಕೊಂಡಿರಲಿಲ್ಲ. ಸುದ್ದಿ ಮಾಡಬೇಕಾದ ಕೆಲವರೂ ಕೂಡ ಜೂಜಾಟದಲ್ಲಿ ಇರೊ ಒಂದಂಶವೂ ಹೊರಬಂದಿದೆ ಎಂದರೆ ತಪ್ಪಾಗಲಾರದು.
ಜೂಜಿನ ಅಡ್ಡೆಯಲ್ಲಿ ಕೆಲ ಪೆÇಲೀಸ್ ಸಿಬ್ಬಂದಿಗಳೆ ಜವಬ್ದಾರಿ ಹೊತ್ತು ಜೂಜಾಟ ನಡೆಸುತ್ತಿದ್ದಾರೆ ಎಂಬುದು ಕೆಲವು ಹಿರಿಯ ಅಧಿಕಾರಿಗಳಿಗೂ ಗೊತ್ತಿದ್ದರೂ ಅವರಿಗೂ ಸಮಾದಾನ ಪಡಿಸುವ ಚಾಣಾಕ್ಷತನ ವಹಿಸಿದ್ದಾರೆ ಎಂಬ ಆರೋಪಗಳು ಕೇಳಿ ಬರುತ್ತಿದೆ.
ಇತ್ತೀಚಿಗೆ ನೂತನ ಎಸ್ಪಿ ದಿವ್ಯ ಅವರ ತಂಡದ ವಿಶೇಷ ಸಿಬ್ಬಂದಿ ದಾಳಿ ನಡೆಸಿ ಎಚ್ಚರಿಕೆ ನೀಡಿದ್ದಾರೆ ಎಂಬ ಮಾಹಿತಿ ಬಂದಿದೆ.
ಒಟ್ಟಿನಲ್ಲಿ ಈ ಟಿನ್ ಹೌಸ್ ಎಂಬ ವಿಶ್ರಾಂತ ಗೃಹ ಜೂಜಿನ ಕೇಂದ್ರವಾಗಿರೋದು ಖಚಿತವಾಗಿದ್ದು ಇದಕ್ಕೆ ಸಂಪೂರ್ಣ ಲಾಕ್ ಹಾಕುವುದರ ಜೊತೆಗೆ ಜೂಜಿಗೆ ನೇತೃತ್ವ ವಹಿಸಿಕೊಂಡ ಪೆÇಲೀಸ್ ಸಿಬ್ಬಂದಿಗಳನ್ನ ಇಲಾಖೆಯಿಂದಲೆ ನಿವೃತ್ತಿಗೊಳಿಸೋದು ಸೂಕ್ತವಾಗಿದೆ.
ಚಾಮರಾಜನಗರದಲ್ಲೂ ಇಂತ ಒಂದು ಜೂಜಿನ ಕೇಂದ್ರದ ಮೇಲೆ ಐದಾರು ವರ್ಷದ ಹಿಂದೆ ಐಜಿಪಿ ರಾಮಚಂದ್ರರಾವ್ ಅವರು ದಾಳಿ ನಡೆಸಿದಂತೆ ಗುಂಡ್ಲುಪೇಟೆಯ ಕೆಲವು ಭಾಗಗಳಲ್ಲಿ ಹಿರಿಯ ಅಧಿಕಾರಿಗಳು ದಾಳಿ ನಡೆಸಿದರೆ ಇಲಾಖೆ ಘನತೆ-ಗೌರವ ಹೆಚ್ಚಲಿದೆ ಎಂಬುದು ಸಾರ್ವಜನಿಕರ ಆಶಯವಾಗಿದೆ.