ವರದಿ: ರಾಮಸಮುದ್ರ ಎಸ್.ವೀರಭದ್ರಸ್ವಾಮಿ
ಚಾಮರಾಜನಗರ: ಚಲಿಸುತ್ತಿದ್ದ ಟಿಪ್ಪರ್ ಗೆ ಬೈಕ್ ಸವಾರರಿಬ್ಬರು ಸಿಲುಕಿ ದಾರುಣವಾಗಿ ಸಾವನ್ನಪ್ಪಿದ ಘಟನೆ ಚಾಮರಾಜನಗರ ರಾಷ್ಟ್ರೀಯ ಹೆದ್ದಾರಿ 209 Àಲ್ಲಿ ನಡೆದಿದೆ.
ಮೃತರು ಬ್ಯಾಡ್ ಮೂಡ್ಲು ಗ್ರಾಮದ ಮಣಿ (28) ಹಾಗೂ ಹೊಂಗನೂರು ಗ್ರಾಮದ ನಟರಾಜು (25) ಎಂದು ಗುರುತಿಸಲಾಗಿದೆ.
ಸವಾರರಿಬ್ಬರು ಊರಿಗೆ ಹೋಗುವಾಗ ಸತ್ತಿ ರಸ್ತೆಯಲ್ಲಿರುವ ಎಚ್.ಪಿ. ಪೆಟ್ರೊಲ್ ಬಂಕ್ ಸಮೀಪವಿದ ರಸ್ತೆಯಲ್ಲಿ ಈ ದುರ್ಘಟನೆ ಸಂಭವಿಸಿದೆ.
ಸ್ಥಳಕ್ಕೆ ಹೆಚ್ಚುವರಿ ಪೆÇಲೀಸ್ ವರಿಷ್ಠಾಧಿಕಾರಿ ಅನಿತಾ ಹದ್ದಣ್ಣನ್ನವರ್ ಭೇಟಿ ನೀಡಿ ಪರಿಶೀಲಿಸಿದ್ದಾರೆ.
ಸಂಚಾರಿ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.