ನವದೆಹಲಿ: ನ್ಯಾಯಾಲಯದ ತೀರ್ಪು ಏನೇ ಬಂದರು ನಾನು ಜಾಮೀನು ಕೇಳುವುದಿಲ್ಲ ಎಂದು ಬಿಜೆಪಿ ನಾಯಕಿ ಉಮಾ ಭಾರತಿ ಹೇಳಿದ್ದಾರೆ.
ಅಯೋಧ್ಯೆಯ ಬಾಬ್ರಿ ಮಸೀದಿ ಧ್ವಂಸ ಪ್ರಕರಣದಲ್ಲಿ ಪ್ರಮುಖ ಆರೋಪಿಗಳ ಪೈಕಿ ಉಮಾ ಭಾರತಿ ಅವರು ಒಬ್ಬರಾಗಿದ್ದು, ಇಂದಿನ ತೀರ್ಪು ಏನೇ ಬಂದರೂ ಸ್ವೀಕರಿಸಲು ಸಿದ್ಧ ಎಂದು ಅವರು ಹೇಳಿದ್ದಾರೆ.
ಅಯೋಧ್ಯೆ ಆಂದೋಲನದಲ್ಲಿ ಪಾಲ್ಗೊಂಡಿದ್ದಕ್ಕೆ ನನಗೆ ಹೆಮ್ಮೆ ಇದೆ. ಈ ಆಂದೋಲನಕ್ಕಾಗಿ ನನ್ನನ್ನು ನೇಣಿಗೆ ಹಾಕಿದರೂ ನಾನು ಅದನ್ನು ಸ್ವೀಕರಿಸುತ್ತೇನೆ. ಜಾಮೀನು ಅರ್ಜಿ ಹಾಕಿದರೆ ನಮ್ಮ ಹೆಮ್ಮೆಗೆ ಘಾಸಿಯಾಗುತ್ತದೆ ಎಂದು ಉಮಾ ಭಾರತಿ ಹೇಳಿದ್ದಾರೆ.
ಉಮಾ ಭಾರತಿ ಅವರು ಕೋವಿಡ್ ಸೋಂಕಿನಿಂದ ಋಷಿಕೇಶ್ ನ ಏಮ್ಸ್ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಹಾಗಾಗಿ ಉಮಾ ಭಾರತಿ ಅವರು ನ್ಯಾಯಾಲಯಕ್ಕೆ ಹಾಜರಾಗಿಲ್ಲ.