ನವದೆಹಲಿ: ಕೇಂದ್ರ ಗೃಹ ಸಚಿವಾಲಯವು ಅನ್‍ಲಾಕ್ 5 ಮಾರ್ಗಸೂಚಿಯನ್ನು ಬುಧವಾರ ಬಿಡುಗಡೆಗೊಳಿಸಿದೆ.
ಈ ಮಾರ್ಗಸೂಚಿಯು ಅ. 1ರಿಂದ ಜಾರಿಗೆ ಬರಲಿದೆ.
ದೇಶದಲ್ಲಿ ಕೊರೊನಾ ವೈರಸ್ ಪ್ರಕರಣಗಳ ಸಂಖ್ಯೆ ಗಣನೀಯವಾಗಿ ಹೆಚ್ಚುತ್ತಿದ್ದರೂ ಕೇಂದ್ರ ಸರ್ಕಾರ ಕೆಲ ಷರತ್ತುಗಳೊಂದಿಗೆ ನಿಯಮ ಸಡಿಲಿಸಿದೆ.
ಅ. 15ರಿಂದ ಚಿತ್ರಮಂದಿರಗಳು, ಮಲ್ಟಿಪ್ಲೆಕ್ಸ್‍ಗಳನ್ನು ತೆರೆಯಲು ಅನುಮತಿ ನೀಡಲಾಗಿದೆ.
ಇದಕ್ಕೆ ಶೀಘ್ರದಲ್ಲಿಯೇ ಕೇಂದ್ರ ಮಾಹಿತಿ ಮತ್ತು ಪ್ರಸಾರ ಸಚಿವಾಲಯ ಮಾರ್ಗಸೂಚಿ ಬಿಡುಗಡೆ ಮಾಡಲಿದೆ.
ಅ. 15ರ ನಂತರ ಶಾಲಾ ಕಾಲೇಜುಗಳನ್ನು ಆರಂಭಿಸಲು ಮಾರ್ಗ ಸೂಚಿಯಲ್ಲಿ ತಿಳಿಸಿದೆ. ಆದರೆ ಆಯಾ ರಾಜ್ಯ ಸರಕಾರ ಅಲ್ಲಿನ ಸ್ಥಿತಿಗತಿ ಮೇರೆಗೆ ಮತ್ತು ಶಾಲಾ ಕಾಲೇಜುಗಳ ಆಡಳಿತ ಮಂಡಲಿ ನಿರ್ಣಯದ ಮೇರೆಗೆ ಆರಂಭಿಸಲು ಸ್ಪಷ್ಟವಾಗಿ ಹೇಳಿದೆ.
ಕ್ರೀಡಾಪಟುಗಳ ತರಬೇತಿಗೆ ಬಳಕೆಯಾಗುವಂತೆ ಸ್ವಿಮ್ಮಿಂಗ್ ಪೂಲ್‍ಗಳನ್ನು ತೆರೆಯಲು ಅನುಮತಿಸಲಾಗಿದ್ದು, ಇದಕ್ಕೆ ನಿರ್ದಿಷ್ಟ ಮಾರ್ಗ ಸೂಚಿಯನ್ನು ಕೇಂದ್ರ ಕ್ರೀಡಾ ಸಚಿವಾಲಯ ಬಿಡುಗಡೆಗೊಳಿಸಲಿದೆ.