ಮೈಸೂರು: ಪೂರ್ವ ಮುಂಗಾರು ಬಾರದೆ ರೈತರು ಹಾಗೂ ಜನತೆ ಕಂಗಾಲಾಗಿರುವ ಹಿನ್ನೆಲೆಯಲ್ಲಿ ಮೈಸೂರು ಜಿಲ್ಲೆಯಲ್ಲಿ ಮಳೆಗಾಗಿ ವಿಶಿಷ್ಟ ಪೂಜೆ ನೆರವೇರಿಸಲಾಯಿತು.
ಕಪ್ಪೆಗಳ ಮದುವೆ ಮಾಡಿಸುವ ಮೂಲಕ ಮಳೆಗಾಗಿ ಪ್ರಾರ್ಥನೆ ಸಲ್ಲಿಸಲಾಗಿದೆ.
ಜಿಲ್ಲೆಯ ಹುಣಸೂರು ತಾಲ್ಲೂಕು ಚಿಕ್ಕೇಗೌಡನ ಕೊಪ್ಪಲಿನಲ್ಲಿ ಮಳೆಗಾಗಿ ಕಪ್ಪೆಗಳ ವಿವಾಹ ಮಾಡಿಸಲಾಗಿದೆ.
ಗ್ರಾಮದ ಪ್ರಮುಖ ಬೀದಿಗಳಲ್ಲಿ ಪುಟ್ಟ ಮಕ್ಕಳು ಕಪ್ಪೆಗಳ ಮೆರವಣಿಗೆ ಮಾಡಿದರು.
ಎರಡು ಕಪ್ಪೆಗಳನ್ನು ಬಿದಿರಿನ ಬೊಂಬಿಗೆ ಕಟ್ಟಿ ವಿವಾಹ ಮಾಡಿ ಮೆರವಣಿಗೆ ಮಾಡಲಾಗಿದೆ.
ವರುಣನ ಕೃಪೆಗಾಗಿ ಮಕ್ಕಳು ವಿವಸ್ತ್ರರಾಗಿ ಕಪ್ಪೆಗಳನ್ನು ಹೊತ್ತು ಸಾಗಿದ್ದು ವಿಚಿತ್ರ ಎನಿಸಿದರೂ ಸತ್ಯ.
ಅಲ್ಲದೆ ಹುಣಸೂರು ತಾಲ್ಲೂಕಿನಲ್ಲಿ ಮಳೆಗಾಗಿ ಈ ವಿಚಿತ್ರ ಆಚರಣೆ ಮಾಡಲಾಗುತ್ತದೆ.
ಈ ಮುಗ್ದ ಮಕ್ಕಳ ಪ್ರಾರ್ಥನೆಗಾದರೂ ವರುಣ ಕೃಪೆ ತೋರಿಯಾನಾ ಎಂಬುದನ್ನು ಕಾದು ನೋಡಬೇಕಿದೆ.