ವಿಜೃಂಭಣೆಯಿಂದ ಜರುಗಿದ ಆಷಾಡ ಮಾಸದ ಚಾಮರಾಜೇಶ್ವರ ರಥೋತ್ಸವ

(ವರದಿ: ರಾಮಸಮುದ್ರ ಎಸ್.ವೀರಭದ್ರಸ್ವಾಮಿ)

ಚಾಮರಾಜನಗರ: ಆಷಾಡ ಮಾಸದ ಜಾತ್ರೆ ಎಂದೆ ಹೆಸರಾದ ಚಾಮರಾಜನಗರ ಚಾಮರಾಜೇಶ್ವರ ರಥೋತ್ಸವ  ವಿಜೃಂಭಣೆಯಿಂದ ಜರುಗಿತು.

ಹೊಸರಥದಲ್ಲಿ ಎರಡನೇ ಬಾರಿಗೆ ಶ್ರೀ ಚಾಮರಾಜೇಶ್ವರ ಕೆಂಪನಂಜಾಂಬದೇವಿ ಸಮೇತ ಶ್ರೀ ಮಹಾರಾಜರ ಮೂರ್ತಿ,ಗಣಪತಿ, ಸುಭ್ರಮಣ್ಯೇಶ್ವರ ಚಾಮರಾಜೇಶ್ವರಸ್ವಾಮಿಯವರ ಮಹಾರಥೋತ್ಸವಕ್ಕೆ ಸಾಥ್ ನೀಡಿದವು.

ಚಾಮರಾಜೇಶ್ವರ ಸ್ವಾಮಿ ರಥೋತ್ಸವ  ಮೂಲ, ಪೂರ್ವಾಷಾಢ ನಕ್ಷತ್ರದಲ್ಲಿ ಮಧ್ಯಾಹ್ನ 12 ರಿಂದ 1 ಗಂಟೆಯವರೆಗೆ ಸಲ್ಲುವ ಶುಭ ಕನ್ಯಾ ಲಗ್ನದಲ್ಲಿ ಶ್ರೀಮನ್ಮಹಾರಥಾರೋಹಣ ಜರುಗಿತು.

ಬೇರೆ,ಬೇರೆ ಜಿಲ್ಲೆಗಳಿಂದ ಆಗಮಿಸಿದ್ದ  ಸಾವಿರಾರು ಹೊಸ ಜೋಡಿಗಳು ರಥೋತ್ಸವದಲ್ಲಿ ಪಾಲ್ಗೊಂಡು ಹಣ್ಣು ಧವನ ಎಸೆದು ಸಂಭ್ರಮಿಸಿದರು.