ಮೈಸೂರು: ವ್ಯಕ್ತಿಯೊಬ್ಬನ ಕೊಲೆಯಾದ 24 ಗಂಟೆಯಲ್ಲಿ ಆರೋಪಿಗಳಿಬ್ಬರನ್ನು ಬಂಧಿಸುವಲ್ಲಿ ಜಿಲ್ಲಾ ಪೊಲೀಸರು ಯಶಸ್ವಿ ಆಗಿದ್ದಾರೆ.
ಮೈಸೂರಲ್ಲಿ ಶನಿವಾರ ನಡೆದ ಸುದ್ದಿಗೋಷ್ಠಿಯಲ್ಲಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಆರ್. ಚೇತನ್ ಅವರು ಈ ಪ್ರಕರಣ ಕುರಿತು ಮಾಹಿತಿ ನೀಡಿದರು.
ಇಲ್ಲಿನ ಬೆಳವಾಡಿ ಸಮೀಪದ ಆದೀಶ್ವರ ಬಡಾವಣೆಯಲ್ಲಿ ವ್ಯಕ್ತಿಯ ಕುತ್ತಿಗೆ ಸೀಳಿ ಕೊಲೆ ಮಾಡಲಾಗಿತ್ತು. ಈ ಪ್ರಕರಣ ಸಂಬಂಧ ಇಬ್ಬರು ಆರೋಪಿಗಳಾದ ರಾಜಸ್ಥಾನ ಮೂಲದ ತೇಜ್ಮಾಲ್ ರಾಯಿಕಾ ಮತ್ತು ಪ್ರಕಾಶ್ ಎಂಬಿಬ್ಬರನ್ನು ಬಂಧಿಸಲಾಗಿದೆ.
ಆರೂಪಿಗಳು ಜೂ. 10ರಂದು ರಾತ್ರಿ ಖಾಲಿ ಜಾಗದಲ್ಲಿ ರವೀಶ್ ಎಂಬಾತನನ್ನು ಕೊಲೆ ಮಾಡಿದ್ದರು. ಈ ಪ್ರರಣದ ಆರೋಪಿಗಳನ್ನು ಪೊಲೀಸರು 24 ಗಂಟೆಯಲ್ಲಿ ಬಂಧಿಸಿದ್ದಾರೆಂದರು.
ರಾಜಸ್ಥಾನ ಮೂಲದ ತೇಜ್ಮಾಲ್ ಹಾಗೂ ರವೀಶ್ ಇಬ್ಬರೂ ಪಾಲುದಾರರಾಗಿ ಮೊಬೈಲ್ ಅಂಗಡಿ ನಡೆಸುತ್ತಿದ್ದರು. ತನ್ನ ಪಾಲಿನ ಹಣವನ್ನು ನೀಡುವಂತೆ ರವೀಶ್ ತೇಜ್ಮಾಲ್ನನ್ನು ಕೇಳಿದ್ದಾನೆ. ಈ ವಿಚಾರವಾಗಿ ಇಬ್ಬರ ನಡುವೆ ಜಗಳವಾಗಿ ತೇಜ್ಮಾಲ್ ತನ್ನ ಸ್ನೇಹಿತ ಪ್ರಕಾಶ್ನೊಂದಿಗೆ ಸೇರಿ ರವೀಶ್ನನ್ನು ಕೊಲೆ ಮಾಡಿದ್ದಾನೆ ಎಂಬುದು ವಿಚಾರಣೆಯಿಂದ ತಿಳಿದುಬಂದಿದೆ ಎಸ್ಪಿ ಚೇತನ್ ಅವರು ತಿಳಿಸಿದರು.
ಈ ಸಂಬಂಧ ಇಲವಾಲ ಪೆÇಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.