2047 ರಲ್ಲಿ ಭಾರತದ ನಿರ್ಣಯಕ್ಕೆ ಜಗತ್ತು ತಲೆಬಾಗುತ್ತದೆ-ಮೋದಿ ವಿಶ್ವಾಸದ ನುಡಿ

ನವದೆಹಲಿ: ಮುಂದಿನ 50 ವರ್ಷ ಒಂದೇ ಮಂತ್ರದೊಂದಿಗೆ ದೇಶದ ಎಲ್ಲ ಜನರು ಭಾರತದ ಏಕತೆ ಮಂತ್ರ ಜಪಿಸುತ್ತಾ ಹಜ್ಜೆ ಹಾಕಬೇಕಿದೆ ಎಂದು ಪ್ರಧಾನಿ ನರೇಂದ್ರ ಮೋದಿಯವರು ದೇಶದ ಜನತೆಗೆ ಕರೆ ನೀಡಿದರು.

ಭ್ರಷ್ಟಾಚಾರ ಮುಕ್ತ ಭಾರತಕ್ಕಾಗಿ ನಾನು ಹೋರಾಟ ಮಾಡುತ್ತಿದ್ದೇನೆ. 2047ರ ವೇಳೆಗೆ ಭಾರತ ಅಭಿವೃದ್ಧಿ ಹೊಂದಿದ ರಾಷ್ಟ್ರವಾಗಲಿದೆ ಎಂದು ಹೇಳಿದರು.

77ನೇ ಸ್ವಾತಂತ್ರ್ಯ ದಿನಾಚಾರಣೆ ಪ್ರಯುಕ್ತ ಕೆಂಪುಕೋಟೆ ಮೇಲೆ ಧ್ವಜಾರೋಹಣ ನೆರವೇರಿಸಿ ಪ್ರಧಾನಿ ಮೋದಿಯವರು ದೇಶವನ್ನುದ್ದೇಶಿಸಿ ಜನತೆಗೆ ಶುಭಾಶಯ ಸಲ್ಲುಸಿ ಮಾತನಾಡಿದರು.

ಮಹಾತ್ಮಾ ಗಾಂಧೀಜಿಯವರ ನೇತೃತ್ವದಲ್ಲಿ ಸತ್ಯಾಗ್ರಹ ಚಳವಳಿ,ಭಗತ್​ಸಿಂಗ್​, ಸುಖದೇವ ಅವರ ತ್ಯಾಗ, ತಪಸ್ಸು, ಬಲಿದಾನದಿಂದ ದೇಶಕ್ಕೆ ಸ್ವಾತಂತ್ರ್ಯ ದೊರೆತಿದೆ, ಅವರಿಗೆ ನಮ್ಮ ನಮನ ಎಂದು ಹೇಳಿದರು.

ಭಾರತದ ವೀರರು ದೇಶದ ಸ್ವಾತಂತ್ರ್ಯಕ್ಕಾಗಿ ಬಲಿದಾನಗೈದರು. ದೇಶದ ನಾರಿ, ಯುವ, ರೈತ ಎಲ್ಲರೂ ಸ್ವಾತಂತ್ರ್ಯಕ್ಕಾಗಿ ಹವಣಿಸುತ್ತಿದ್ದರು. ಅನೇಕ ಮಹಾಪುರಷರು ದೇಶದ ಸ್ವಾತಂತ್ರ್ಯಕ್ಕಾಗಿ ಹಾಗೂ ಬ್ರಟೀಷರ ಗುಲಾಮಗಿರಿಯಿಂದ ಹೊರಬಹರುಲು ಶ್ರಮಿಸಿದರು ಎಂದು ತಿಳಿಸಿದರು.

ದೇಶದ ಮುಂದೆ ಮತ್ತೊಂದು ಅವಕಾಶ ಬಂದಿದೆ, ಅಮೃತಕಾಲದ ಮೊದಲ ವರ್ಷದಲ್ಲಿದ್ದೇವೆ. ಈ ಸಮಯದಲ್ಲಿ ಸರ್ವಜನ ಹಿತಾಯ ಸರ್ವಜನ ಸುಖಾಯಗಾಗಿ ನಾವು ಮುಂದೆ ಬಂದರೆ ಮುಂದಿನ ಪೀಳಿಗೆಗೆ ಬಲಿಷ್ಠ ಭಾರತ ನಿರ್ಮಾಣ ಮಾಡಬಹುದು ಎಂದು ತಿಳಿಸಿದರು.

ಯುವ ಶಕ್ತಿ ಮೇಲೆ ನನಗೆ ಭರವಸೆ ಇದೆ, ಅವರಲ್ಲಿ ಸಾಮರ್ಥ್ಯವಿದೆ. ಜಗತ್ತಿನ ಮೂರು ಸ್ಟಾರ್ಟಪ್ ​​ನಲ್ಲಿ​ ನಮ್ಮ ಯುವಕರು ಇದ್ದಾರೆ. ಭವಿಷ್ಯದ ದಿನಗಳಲ್ಲಿ ಭಾರತದ ಟೆಕ್ನಾಲಜಿಯಲ್ಲಿ ನಂಬರ್​ 1 ಆಗಲಿದೆ ಎಂದು ಭವಿಷ್ಯ ನುಡಿದರು.

ಭಾರತ ಜಗತ್ತಿನಲ್ಲಿ ಅಚ್ಚರಿ ಮೂಡಿಸಿದೆ, ಕಳೆದ ಒಂದು ವರ್ಷದಿಂದ ದೇಶದಲ್ಲಿ ಜಿ20 ಸಂಭ್ರಮಾಚರಣೆ ಮನೆ ಮಾಡಿದೆ, ಜಗತ್ತಿನ ವಿವಿಧ ದೇಶಗಳು ಭಾರತವನ್ನು ಗೌರವಿಸುತ್ತಿವೆ,ಕೊರೊನಾ ನಂತರ ದೇಶ ಸಾಕಷ್ಟು ಬದಲಾಗಿದ್ದು,ಇದು ನಿಮ್ಮ ಸಾಮರ್ಥ್ಯದ ಪ್ರತೀಕ.

ಭಾರತದ ವೈವಿಧ್ಯತೆಯನ್ನು ವಿಶ್ವ ಬೆರಗುಗಣ್ಣಿನಿಂದ ನೋಡುತ್ತಿದೆ. ಮುನ್ನುಗ್ಗುತ್ತಿರುವ ಭಾರತವನ್ನು ತಡೆಯಲು ಯಾರಿಂದಲೂ ಸಾಧ್ಯವಿಲ್ಲ,
ಪ್ರತಿ ಕ್ಷೇತ್ರದಲ್ಲೂ ಭಾರತ ಅಭಿವೃದ್ಧಿ ಹೊಂದುತ್ತಿದೆ ಎಂದು ಪ್ರಧಾನಿ ತಿಳಿಸಿದರು.

ದೇಶದ ಗಡಿ ಕಾಯುತ್ತಿರುವ ಸೈನಿಕರಿಗೆ ಅಭಿನಂದನೆ ಸಲ್ಲಿಸುತ್ತೇನೆ. ಸೇನೆಯಲ್ಲಿ ಹೊಸ ಹೊಸ ಅವಿಷ್ಕಾರಗಳು ನಡೆಯುತ್ತಿವೆ. ಪರಿವರ್ತನೆಯ ವಾತಾವರಣ ನಿರ್ಮಾಣ ಮಾಡಿದ್ದೇವೆ.

2047 ರಲ್ಲಿ ಭಾರತದ ನಿರ್ಣಯಕ್ಕೆ ಜಗತ್ತು ತಲೆಬಾಗುತ್ತದೆ ಎಂದು ಪ್ರಧಾನಿ ಮೋದಿ ಹೇಳಿದರು.

ಕುಟುಂಬವಾದಿ ರಾಜಕೀಯ ದೇಶದ ಪ್ರತಿಭಾವಂತರ ವೈರಿ. ಪ್ರಜಾಪ್ರಭುತ್ವ ಗಟ್ಟಿಗೊಳಿಸಲು ಅದನ್ನು ನಿರ್ಮೂಲನೆ ಮಾಡಬೇಕು,ಭ್ರಷ್ಟಾಚಾರವನ್ನು ನಮ್ಮ ಸರ್ಕಾರ ಸಹಿಸುವುದಿಲ್ಲ ಎಂದು ನರೇಂದ್ರ ಮೋದಿ ಪರೋಕ್ಷವಾಗಿ ಕಾಂಗ್ರೆಸ್ ವಿರುದ್ದ ಇದೇ ವೇಳೆ ವಾಗ್ದಾಳಿ ನಡೆಸಿದರು.