ವಿಜಯನಗರಕ್ಕೆ ಕಲ್ಯಾಣ ಕರ್ನಾಟಕದ ಎಲ್ಲ ಸವಲತ್ತು ದೊರೆಯಲಿವೆ -ಸಚಿವ ಆನಂದ್ ಸಿಂಗ್

ವಿಜಯನಗರ: ನೂತನ ವಿಜಯನಗರ ಜಿಲ್ಲೆಗೆ ಕಲ್ಯಾಣ ಕರ್ನಾಟಕದ ಎಲ್ಲ ಸವಲತ್ತುಗಳು ಕೈತಪ್ಪಿ ಹೋಗಲಿವೆ ಎಂಬ ಆತಂಕ ದೂರವಾಗಿದೆ.
ರಾಜ್ಯ ಸರ್ಕಾರ ಗುರುವಾರ (ಫೆ. 25) ಈ ಸಂಬಂಧ ಅಧಿಕೃತ ತಿದ್ದುಪಡಿ ಅಧಿಸೂಚನೆ ಹೊರಡಿಸಿದೆ.
ಬೀದರ್, ಕಲಬುರ್ಗಿ, ಯಾದಗಿರಿ, ರಾಯಚೂರು, ಕೊಪ್ಪಳ, ಬಳ್ಳಾರಿ ಮತ್ತು ವಿಜಯನಗರ ಕಲ್ಯಾಣ ಕರ್ನಾಟಕ ವ್ಯಾಪ್ತಿಯ ಜಿಲ್ಲೆಗಳು.
ಬಳ್ಳಾರಿ ಜಿಲ್ಲೆಯಿಂದ ವಿಭಜನೆಗೊಂಡು ಹೊಸದಾಗಿ ಅಸ್ತಿತ್ವಕ್ಕೆ ಬಂದಿರುವ ವಿಜಯನಗರ ಜಿಲ್ಲೆಗೆ ಈ ಹಿಂದಿನಂತೆ ಸಂವಿಧಾನದ 371 (ಜೆ) ಸೌಲಭ್ಯ ಅನ್ವಯವಾಗಲಿದೆ.
ಕಲ್ಯಾಣ ಕರ್ನಾಟಕ ಪ್ರಾದೇಶಿಕ ಅಭಿವೃದ್ಧಿ ಮಂಡಳಿಯ ಎಲ್ಲ ಸವಲತ್ತುಗಳು ಹೊಸ ಜಿಲ್ಲೆಗೆ ಅನ್ವಯಿಸಲಿದೆ.
ಶಿಕ್ಷಣ ಸಂಸ್ಥೆಗಳಿಗೂ ಈ ಹಿಂದಿನಂತೆಯೇ ಕಲ್ಯಾಣ ಕರ್ನಾಟಕದ ಸೌಲಭ್ಯಗಳು ಸಿಗಲಿವೆ ಎಂದು ಅಧಿಸೂಚನೆಯಲ್ಲಿ ಸ್ಪಷ್ಟಪಡಿಸಲಾಗಿದೆ.
ಹೊಸ ಜಿಲ್ಲೆ ರಚನೆಯಿಂದ ಈ ಹಿಂದಿನ ಯಾವ ಸೌಲಭ್ಯಗಳು ಹೋಗುವುದಿಲ್ಲ ಎಂದು ಮೂಲಸೌಕರ್ಯ ಅಭಿವೃದ್ಧಿ, ಹಜ್ ಮತ್ತು ವಕ್ಫ್ ಖಾತೆ ಸಚಿವ ಆನಂದ್ ಸಿಂಗ್ ಹೇಳಿದ್ದರು.