ಬೆಂಗಳೂರು: ರೇಣುಕಾ ಸ್ವಾಮಿ ಕೊಲೆ ಪ್ರಕರಣ ಇಡೀ ರಾಜ್ಯದಲ್ಲಿ ಸಂಚಲನ ಸೃಷ್ಟಿಸಿದ್ದರೆ,ಇತ್ತ ಕೆಲ ಸೆಲೆಬ್ರಿಟಿಗಳು ಅನಿಸಿಕೆ ಹಂಚಿಕೊಂಡಿದ್ದು ಇದರಲ್ಲಿ ಜಗ್ಗೇಶರ ಬರಹ ವೈರಲ್ ಆಗಿಬಿಟ್ಟಿದೆ.
ಎಲ್ಲಾ ಸೆಲೆಬ್ರಿಟಿಗಳಿಗಿಂತ ನಟ ಜಗ್ಗೇಶ್ ಮಾರ್ಮಿಕವಾಗಿ ಟ್ವೀಟ್ ಮಾಡಿರುವುದು ವಿಶೇಷ ವಾಗಿದೆ,ಜತೆಗೆ ಚರ್ಚೆಗೂ ಗ್ರಾಸ ಒದಗಿಸಿದೆ.
ಸರ್ವ ಆತ್ಮಾನೇನ ಬ್ರಹ್ಮ ಎಂದು ಜಗ್ಗೇಶ್ ಟ್ವೀಟ್ ಮಾಡಿ,ಇದರ ಅರ್ಥವನ್ನೂ ವಿವರಿಸಿದ್ದಾರೆ.
ಸರ್ವ ಜೀವಿಯಲ್ಲಿ ದೇವರಿದ್ದಾನೆ, ಯಾರನ್ನು ಕೊಲ್ಲುವ ಹಕ್ಕು ಯಾರಿಗೂ ಇಲ್ಲ ಎಂದು ಜಗ್ಗೇಶ್ ಹೇಳಿದ್ದಾರೆ. ಕರ್ಮ ಜೀವನವನ್ನು ಹಿಂಬಾಲಿಸುತ್ತದೆ,ಅವನ ಪಾಪಕರ್ಮ ಅವನನ್ನ ಸುಡುತ್ತದೆ.
ಕಲಿಯುಗದಲ್ಲಿ ದೇವರು ಕಲ್ಲಲ್ಲ ಎಲ್ಲಾ ಕರ್ಮಕ್ಕೂ ತತಕ್ಷಣ ಫಲಿತಾಂಶ ಇರುತ್ತದೆ, ರಾಮನಾಗು ರಾವಣನಾದರೆ ಅಂತ್ಯ ಎಂದಿದೆ ಸನಾತನ ಕೃತಿ ಎಂದು ಅವರು ಬರೆದಿದ್ದಾರೆ.
ಮದಕ್ಕೆ ಕಾರುಣ್ಯದ ಅರಿವಿಲ್ಲ ಎನ್ನುವ ವಾಕ್ಯವನ್ನೂ ಜಗ್ಗೇಶ್ ಬಳಸಿದ್ದಾರೆ ಅಂದರೆ ಮದ ಇದ್ದವನಿಗೆ ಕರುಣೆ ಇರುವುದಿಲ್ಲ ಎಂಬುದು ಈ ವಾಕ್ಯದ ಅರ್ಥ.
ಜಗ್ಗೇಶರ ಈ ಟ್ವೀಟ್ ಸಖತ್ ವೈರಲ್ ಆಗುತ್ತಿದೆ.ಇದು ದರ್ಶನ್ ಕುರಿತೇ ಬರೆದಂತಿದೆ ಎಂದು ಕೆಲವರು ಮಾತನಾಡುತ್ತಿದ್ದಾರೆ,ಆದರೆ ಜಗ್ಗೇಶ್ ಯಾರ ಕುರಿತು ಬರೆದಿದ್ದಾರೊ ಗೊತ್ತಿಲ್ಲ ಅರ್ಥಗರ್ಭಿತ ವಾಗಿರುವುದಂತೂ ಸತ್ಯ.