ವೇಶ್ಯಾವಾಟಿಕೆ: ಮನೆ ಮೇಲೆ ದಾಳಿ; ಉತ್ತರ ಭಾರತದ ಇಬ್ಬರು ಮಹಿಳೆಯರು ಸೇರಿ ಮೂವರ ರಕ್ಷಣೆ

ಮೈಸೂರು: ಮೈಸೂರು ಜಿಲ್ಲಾ ಪೊಲೀಸರು ವೇಶ್ಯಾವಾಟಿಕೆ ದಂಧೆ ನಡೆಯುತ್ತಿದೆ ಎಂಬ ಮಾಹಿತಿ ಮೇರೆಗೆ ಮನೆಯೊಂದರ ಮೇಲೆ ದಾಳಿ ನಡೆಸಿ ಮೂವರು ಮಹಿಳೆಯರನ್ನು ರಕ್ಷಿಸಿದ್ದಾರೆ.
ಮೈಸೂರು ದಕ್ಷಿಣ ಪೆÇಲೀಸ್ ಠಾಣೆ ವ್ಯಾಪ್ತಿಯ ಕಾಮನಕೇರಿ ಹುಂಡಿ ಗ್ರಾಮದ ಮನೆಯೊಂದರಲ್ಲಿ ವೇಶ್ಯಾವಾಟಿಕೆ ದಂಧೆ ನಡೆಯುತ್ತಿದೆ ಎಂಬ ಖಚಿತ ಮಾಹಿತಿ ಮೇರೆಗೆ ಅಡೀಷನಲ್ ಎಸ್.ಪಿ ಆರ್. ಶಿವಕುಮಾರ್, ಮಾನವ ಕಳ್ಳಸಾಗಣೆ ನಿಷೇಧ ಘಟಕದ ಸಿಬ್ಬಂದಿಯೊಂದಿಗೆ ದಾಳಿ ಮಾಡಿ ಉತ್ತರ ಭಾರತದ ಇಬ್ಬರು ಮಹಿಳೆಯರು ಸೇರಿದಂತೆ ಮೂವರು ಮಹಿಳೆಯರನ್ನು ರಕ್ಷಿಸಿದ್ದಾರೆ.
ಸಿ.ಪಿ.ಐ, ಮಹೇಶ್, ವರುಣ ಠಾಣೆ ಪಿ.ಎಸ್.ಐ, ಲಕ್ಷ್ಮಿ, ಮಹಿಳಾ ಠಾಣೆ ಪಿ.ಎಸ್.ಐ ಎಲ್. ಸುಷ್ಮಾ ಹಾಗೂ ಎ.ಹೆಚ್.ಟಿ.ಯು ಸಿಬ್ಬಂದಿ ಸುನಿಲ್, ರಾಮ್ ಪ್ರಸಾದ್, ಕುಮುದ, ಶ್ರೀನಿವಾಸ್ ಇತರರು ಈ ಕಾರ್ಯಾಚರಣೆಯಲ್ಲಿ ಭಾಗವಹಿಸಿದ್ದರು.