ಮೈಸೂರು: ವರದಕ್ಷಿಣೆ ಕಿರುಕುಳ ನೀಡಿ ಪತ್ನಿಯನ್ನು ಕೊಲೆ ಮಾಡಿದ್ದ ಪತಿಗೆ ಮೈಸೂರು ನ್ಯಾಯಾಲಯ ಜೀವಾವಧಿ ಶಿಕ್ಷೆ ವಿಧಿಸಿದೆ.
ಮೈಸೂರು ಜಿಲ್ಲೆಯ ನಂಜನಗೂಡು ತಾಲೂಕಿನ ಸುತ್ತೂರು ಗ್ರಾಮದ ಶಿವಣ್ಣ ಎಂಬಾತನೇ ಶಿಕ್ಷೆಗೆ ಗುರಿಯಾದ ವ್ಯಕ್ತಿ.
ಈತ ತನ್ನ ಹೆಂಡತಿ ದೇವಿ ಎಂಬವರನ್ನು ಕೊಲೆ ಮಾಡಿದ್ದ ಆರೋಪ ಸಾಬೀತಾದ ಹಿನ್ನೆಲೆಯಲ್ಲಿ ನ್ಯಾಯಾಲಯ ಈತನಿಗೆ ಜೀವಾವಧಿ ಶಿಕ್ಷೆ ವಿಧಿಸಿದೆ.
2012ರಲ್ಲಿ ಉದ್ಬೂರು ಗ್ರಾಮದ ಅಂಕನಾಯಕ ಪುತ್ರಿ ದೇವಿ ಮತ್ತು ಶಿವಣ್ಣ ನಡುವೆ ವಿವಾಹ ನಡೆದಿತ್ತು. ವಿವಾಹ ಸಮದರ್ಭದಲ್ಲಿ ವರದಕ್ಷಿಣೆಯಾಗಿ 50 ಸಾವಿರ ರೂ. ಹಣವನ್ನು ಶಿವಣ್ಣನಿಗೆ ನೀಡಲಾಗಿತ್ತು.
ವಿವಾಹವಾದ ಎರಡು ವರ್ಷ ನಂತರ ಹೆಚ್ಚಿನ ವರದಕ್ಷಿಣೆ ತರುವಂತೆ ಪತ್ನಿಗೆ ಶಿವಣ್ಣ ಹಿಂಸೆ ನೀಡುತ್ತಿದ್ದ ಎನ್ನಲಾಗಿದೆ.
2016ರ ಮಾ. 27ರ ರಾತ್ರಿ ದೇವಿಯನ್ನು ಶಿವಣ್ಣ ಕೊಲೆ ಮಾಡಿ, ಶವವನ್ನು ಗೋಣಿ ಚೀಲದಲ್ಲಿ ಸುತ್ತಿ ತೆಗೆದುಕೊಂಡು ಹೋಗಿ ಪೆÇದೆಯಲ್ಲಿ ಎಸೆದಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.
2016ರ ಏ.22 ರಂದು ಬಿಳಿಗೆರೆ ಸೋನಹಳ್ಳಿ ಬಳಿಯ ಪೆÇದೆಯಲ್ಲಿ ದೇವಿಯ ಶವ ಪತ್ತೆಯಾಗಿತ್ತು.
ಈ ಸಂಬಂಧ ಬದನವಾಳು ಪೆÇಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.
ತನಿಖೆ ನಡೆಸಿದ್ದ ಅಂದಿನ ನಂಜನಗೂಡು ಉಪ ವಿಭಾಗದ ಎಎಸ್ಪಿ ದಿವ್ಯಾ ಸಾರಾ ಥಾಮಸ್ ಅವರು ನ್ಯಾಯಾಲಯಕ್ಕೆ ದೋಷಾರೋಪಣಾ ಪತ್ರ ಸಲ್ಲಿಸಿದ್ದರು.
ಈ ಪ್ರಕರಣದ ವಿಚಾರಣೆ ನಡೆಸಿದ ಮೈಸೂರಿನ 5ನೇ ಹೆಚ್ಚುವರಿ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಲಯ ನ್ಯಾಯಾಧೀಶರಾದ ಕೆ. ದೊಡ್ಡೇಗೌಡ ಅವರು ಶಿವಣ್ಣಗೆ ಜೀವಾವಧಿ ಶಿಕ್ಷೆ ಹಾಗೂ 18 ಸಾವಿರ ರೂ. ದಂಡ ವಿಧಿಸಿ ತೀರ್ಪು ನೀಡಿದ್ದಾರೆ.
ದಂಡದ ಹಣದಲ್ಲಿ ಮೃತ ದೇವಿ ತಂದೆ ತಾಯಿಗೆ 10 ಸಾವಿರ ರೂ. ಪರಿಹಾರ ನೀಡಬೇಕು.
ಜಿಲ್ಲಾ ಕಾನೂನು ನೆರವು ಸಮಿತಿಗೆ ಮೃತಳ ತಂದೆ- ತಾಯಿಗೆ ಸೂಕ್ತ ಪರಿಹಾರ ನೀಡಲು ಶಿಫಾರಸ್ಸು ಮಾಡಿ ನ್ಯಾಯಾಧೀಶರು ತೀರ್ಪು ನೀಡಿದ್ದಾರೆ.
ಸರ್ಕಾರದ ಪರವಾಗಿ ಸರ್ಕಾರಿ ಅಭಿಯೋಜಕ ನಾಗಪ್ಪ ಸಿ. ನಾಕ್ಮನ್ ವಾದ ಮಂಡಿಸಿದ್ದರು.