ಡೆಹ್ರಾಡೂನ್: ಉತ್ತರಾಖಂಡದ ಚಮೋಲಿ ಜಿಲ್ಲೆಯ ಜೋಶಿಮಠ ಸಮೀಪ ಇಂದು
ಹೆಲಿಕಾಪ್ಟರ್ ಪತನಗೊಂಡು ಬೆಂಗಳೂರು ಮೂಲದ ಐವರು ಸೇರಿ ಆರು ಮಂದಿ ಮೃತಪಟ್ಟಿದ್ದಾರೆ.
ಹೆಲಿಕಾಪ್ಟರ್ ಬದ್ರಿನಾಥದಿಂದ ಡೆಹ್ರಾಡೂನ್‌ಗೆ ಪ್ರಯಾಣಿಸುತ್ತಿತ್ತು. ಹೆಲಿಕಾಪ್ಟರ್‌ನಲ್ಲಿದ್ದ ಪೈಲಟ್, ಬೆಂಗಳೂರು ಮೂಲದ ಐವರು ಸ್ಥಳದಲ್ಲಿ ಮೃತಪಟ್ಟಿದ್ದಾರೆ ಎಂದು ವರದಿಯಾಗಿದೆ.
ಟ್ರಾನ್ಸ್ ಭಾರತ್ ಏವಿಯೇಷನ್ ಗೆ ಸೇರಿದ ಹೆಲಿಕಾಪ್ಟರ್ ಪತನವಾಗಿದೆ.ಕ್ಯಾಪ್ಟನ್ ಹಿಮಾಂಶು, ಬೆಂಗಳೂರು ಮೂಲದ ಪ್ರತಾಪ್, ಅರುಣ್ ಸಾಲಂಕಿ (ಸಿಸಿಬಿ ಇನ್ಸ್ಪೆಕ್ಟರ್), ಶಂಕರ್ ಗೌಡ (ವಕೀಲರು), ಕೆ. ಸುಧೀರ್, ನಾಗರಾಜು ಸಾವಿಗೀಡಾಗಿದ್ದಾರೆ
ಜೋಶಿಮಠದ ಚಾಯೆನ್ ಗ್ರಾಮದ ಬಳಿ ಹವಾಮಾನ ವೈಪರೀತ್ಯದಿಂದ ಹೆಲಿಕಾಪ್ಟರ್ ಪತನಗೊಂಡಿದೆ.
ಡೆಹ್ರಾಡೂನ್ ಜಿಲ್ಲಾಡಳಿತ, ವಿಪತ್ತು ನಿರ್ವಹಣಾ ಇಲಾಖೆ, ಎಸ್‌ಡಿಆರ್‌ಎಫ್, ಐಟಿಬಿಪಿ ಪಡೆಗಳು ಜಂಟಿಯಾಗಿ ರಕ್ಷಣಾ ಕಾರ್ಯಾಚರಣೆ ನಡೆಸಿದವು.
ನಾನು ಸ್ವತಃ ಈ ಇಡೀ ಘಟನೆಯ ಮೇಲ್ವಿಚಾರಣೆ ನಡೆಸುತ್ತಿದ್ದೇನೆ’ ಎಂದು ಉತ್ತರಾಖಂಡ ಮುಖ್ಯಮಂತ್ರಿ ಪುಷ್ಕರ್ ಸಿಂಗ್ ಧಾಮಿ ‘ಎಕ್ಸ್’ನಲ್ಲಿ ಪೋಸ್ಟ್ ಮಾಡಿದ್ದಾರೆ.
ಬದರಿನಾಥದಿಂದ ಹೊರಟು ಡೆಹ್ರಾಡೂನ್‌ಗೆ ಹೋಗುತ್ತಿದ್ದಾಗ ಮಧ್ಯಾಹ್ನ 2.20ರ ವೇಳೆಗೆ ಚಮೋಲಿ ಜಿಲ್ಲೆಯ ಜೋಶಿಮಠ ಪ್ರದೇಶದ ಚಾಯ್ ಗ್ರಾಮದ ಬಳಿ ಅಪಘಾತಕ್ಕೀಡಾಗಿದೆ.
ಅರುಣ್ ಸೋಲಂಕಿ ಅವರಿಗೆ ಪತ್ನಿ ಹಾಗೂ ಇಬ್ಬರು ಮಕ್ಕಳು ಇದ್ದಾರೆ.ಉಳಿದವರ ಕುರಿತು ಹೆಚ್ಚಿನ ಮಾಹಿತಿ ಲಭ್ಯವಾಗಿಲ್ಲ.
ಕರ್ನಾಟಕ ಸರ್ಕಾರ ಕನ್ನಡಿಗರ ಮೃತದೇಹಗಳನ್ನು ಬೆಂಗಳೂರಿಗೆ ತರಿಸಿಕೊಳ್ಳಲು ಎಲ್ಲಾ ಕ್ರಮ ವಹಿಸಿದೆ.

