ದಸರಾ ಜಟಾಪಟಿ: ಪೊಲೀಸ್ ಕಮಿಷನರ್ ಸೀಮಾ ಲಾಟ್ಕರ್ ಔಟ್

ಮೈಸೂರು: ಅರಮನೆ v/s ಸರ್ಕಾರದ ಜಟಾಪಟಿ ಹಿನ್ನೆಲೆಯಲ್ಲಿ ಮೈಸೂರು ನಗರ ಪೊಲೀಸ್ ಕಮಿಷನರ್ ಸೀಮಾ ಲಾಟ್ಕರ್ ಅವರನ್ನು ವರ್ಗಾವಣೆ ಮಾಡಲಾಗಿದೆ.

ನಾಡಹಬ್ಬ ದಸರಾ ವೇಳೆ ಪೊಲೀಸರ ಲೋಪದ ಹಿನ್ನೆಲೆಯಲ್ಲಿ ಸೀಮಾ ಲಾಟ್ಕರ್ ಅವರನ್ನು ವರ್ಗಾವಣೆ ಆಗಿದೆ ಎನ್ನಲಾಗುತ್ತಿದೆ.

ಸಾಲು-ಸಾಲು ಲೋಪ ಎಸಗಿದ್ದಕ್ಕೆ ಬೇಸರಗೊಂಡಿದ್ದ ಪ್ರಮೋದಾದೇವಿ ಒಡೆಯರ್ ಅವರು ಸರ್ಕಾರಕ್ಕೆ ಪೊಲೀಸರ ಲೋಪಗಳ ಕುರಿತು ಪತ್ರ ಬರೆದಿದ್ದರು‌

ಅಂಬಾರಿ ಕಟ್ಟುವ, ಅಂಬಾರಿ ಹಿಂತಿರುಗಿಸುವ, ಜಟ್ಟಿ ಕಾಳಗ ನಿಂತ ಪ್ರಕರಣ, ಅರಮನೆಯ ಪಾರ್ಕಿಂಗ್ ವಿಚಾರದಲ್ಲಿ ಪೊಲೀಸರ ಲೋಪ, ಅರಮನೆ ಸಿಬ್ಬಂದಿ ಜೊತೆಗೆ ಪೊಲೀಸರ ಅನುಚಿತ ವರ್ತನೆ, ಅಂಬಾರಿ ಕಟ್ಟುವ ಸ್ಥಳದಲ್ಲಿ ಫೋಟೋ ಕ್ಲಿಕ್ಕಿಸಿಕೊಂಡಿದ್ದ ಪೊಲೀಸರು ಸೇರಿದಂತೆ ಎಲ್ಲಾ ಲೋಪಗಳ ಕುರಿತು ರಾಜಮಾತೆ ಸುಧೀರ್ಘ ಪತ್ರ ಬರೆದಿದ್ದರು.

ಈ ವೇಳೆ ಸಚಿವ ಯತೀಂದ್ರ ಅವರ ಬಳಿ ತಮ್ಮ ತಪ್ಪಿಲ್ಲ ಎಂದು ಕಮಿಷನರ್ ಸೀಮಾ ಲಾಟ್ಕರ್ ತಮ್ಮದೇನೂ ತಪ್ಪಿಲ್ಲ ಎಂದು ಹೇಳಿದ್ದರು. ನಾಲ್ಕು ಪುಟದ ಪತ್ರದ ಮೂಲಕ ಸಮಜಾಯಿಷಿ ನೀಡಿದ್ದರು.

ದಸರಾ ಜಟಾಪಟಿಗೆ ಮೊದಲ ವಿಕೆಟ್ ಪತನವಾಗಿದೆ.ಮುಂದೇನು ಕಾದು ನೋಡಬೇಕಿದೆ.