ಹಗಲಲ್ಲೇ ನಿಂಬುಜಾದೇವಿ ದೇವಾಲಯದಲ್ಲಿ ಚಿನ್ನದ ತಾಳಿಗಳ ಕದ್ದ ಕಳ್ಳರು

ಮೈಸೂರು: ಮೈಸೂರಿನ ನಜರ್‌ಬಾದ್‌ ನಲ್ಲಿರುವ ನಿಂಬುಜಾದೇವಿ ಅಮ್ಮನವರ ದೇವಸ್ಥಾನದಲ್ಲಿ ಹಾಡ ಹಗಲೇ 2.50 ಲಕ್ಷ ರೂ. ಮೌಲ್ಯದ 3 ಚಿನ್ನದ ತಾಳಿಗಳನ್ನು ಕಳವು‌ ಮಾಡಲಾಗಿದೆ.

ದೇವಸ್ಥಾನದ ಅರ್ಚಕ ದಶರಥ್ ಗಾರ್ಗ್ ಅವರು ನ.16ರಂದು ದೇವಿಗೆ 3 ಚಿನ್ನದ ತಾಳಿಗಳನ್ನು ಹಾಕಿದ್ದರು. ನಿಂಬುಜಾದೇವಿ ದೇವಾಲಯಕ್ಕೆ ಹೊಂದಿಕೊಂಡಂತಿರುವ ಆಂಜನೇಯ ಸ್ವಾಮಿ ದೇವಸ್ಥಾನಕ್ಕೆ ಹೋಗಿ ಪೂಜೆ ಮಾಡಿ ಬರುವಷ್ಟರಲ್ಲಿ ಖದೀಮರು ದೇವರ ಮೇಲಿದ್ದ 20ರಿಂದ 22 ಗ್ರಾಂ ತೂಕದ 3 ಚಿನ್ನದ ತಾಳಿಗಳನ್ನು ಕಳವು ಮಾಡಿದ್ದಾರೆ.

ಈ ಸಂಬಂಧ ಸದಾನಂದ ಸುಬ್ಬಜೆಟ್ಟಪ್ಪ ನವರ ಜಟ್ಟಿಗಳ ಗರಡಿ ಹಾಗೂ ನಿಂಬುಜಾದೇವಿ ಅಮ್ಮನವರ ದೇವಸ್ಥಾನ ಟ್ರಸ್ಟ್ ಕಾರ್ಯದರ್ಶಿ ಎಂ. ಕರಣ್ ನೀಡಿದ್ದಾರೆ.ನಜರ್‌ಬಾದ್ ಠಾಣೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಿದ್ದಾರೆ.